Advertisement
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಇಸ್ರೋದ ಅಧ್ಯಕ್ಷ ಕೆ. ಶಿವನ್, “”2020ರಲ್ಲಿ ನಾವು ಪ್ರಮುಖವಾದ 10 ಉಡಾವಣೆಗಳನ್ನು ಕೈಗೊಳ್ಳಲಿದ್ದೇವೆ. ಇವುಗಳಲ್ಲಿ ಜಿಐಸ್ಯಾಟ್ 1, ಜಿಐಸ್ಯಾಟ್-12 ಎಂಬ ಎರಡು ಉಪಗ್ರಹಗಳು, ಭೂಪರಿವೀಕ್ಷಣೆ ಉದ್ದೇಶದ ಆರ್‌ಐಸ್ಯಾಟ್-2ಬಿಆರ್2, ಸರ್ವೇಕ್ಷಣೆ ಉದ್ದೇಶಕ್ಕಾಗಿ ತಯಾರಾಗಲಿರುವ ಮೈಕ್ರೋಸ್ಯಾಟ್‌ಗಳ ಉಡಾವಣೆಗಳು ಪ್ರಮುಖವಾದವು. ಇನ್ನು, ಸೂರ್ಯನ ಅಧ್ಯಯನಕ್ಕಾಗಿ ಹಾರಿಬಿಡಲಾಗುವ ಆದಿತ್ಯ ಎಲ್1 ನೌಕೆಯನ್ನು 2020ರ ಮಧ್ಯಭಾಗದಲ್ಲಿ ಉಡಾಯಿಸಲು ಯೋಜಿಸಲಾಗಿದ್ದು, 2020ರ ಡಿಸೆಂಬರ್‌ನಲ್ಲಿ ಮಾನವ ರಹಿತ ಗಗನಯಾನವನ್ನು ಕೈಗೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ” ಎಂದು ಅವರು ತಿಳಿಸಿದ್ದಾರೆ.
Advertisement
ಹೊಸ ಸಾಧನೆಯತ್ತ ಇಸ್ರೋ ಹೆಜ್ಜೆ : ಸೂರ್ಯನ ಅಧ್ಯಯನ ಸೇರಿ ಪ್ರಮುಖ 10 ಉಡಾವಣೆಗೆ ತಯಾರಿ
09:43 AM Dec 24, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.