Advertisement

Vikram lander ಫೋಟೊ ಸೆರೆ ಹಿಡಿದ ಚಂದ್ರಯಾನ-2: ಪೋಸ್ಟ್ ಮಾಡಿ ಡಿಲೀಟ್ ಮಾಡಿದ ಇಸ್ರೋ

12:29 PM Aug 25, 2023 | Team Udayavani |

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿರುವ ವಿಕ್ರಮ್ ಲ್ಯಾಂಡರ್ ನ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಬಿಡುಗಡೆ ಮಾಡಿದೆ. ಚಂದ್ರಯಾನ-2 ಆರ್ಬಿಟರ್ ತನ್ನ ಹೈರೆಸೊಲ್ಯೂಶನ್ ಕ್ಯಾಮರಾದಲ್ಲಿ ಸೆರೆ ಹಿಡಿದ ಚಿತ್ರವನ್ನು ಇಸ್ರೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

Advertisement

ಚಂದ್ರಯಾನ-2 ರ ಆರ್ಬಿಟರ್ ಹೈ-ರೆಸಲ್ಯೂಶನ್ ಕ್ಯಾಮೆರಾ (OHRC) ಪ್ರಸ್ತುತ ಚಂದ್ರನ ಸುತ್ತ ಅತ್ಯುತ್ತಮ ರೆಸಲ್ಯೂಶನ್ ಹೊಂದಿದೆ ಎಂದು ಇಸ್ರೋ X ಜಾಲತಾಣದಲ್ಲಿ ಬರೆದಿದೆ.

ಆದರೆ, ಕೆಲವೇ ಕ್ಷಣಗಳಲ್ಲಿ ಬಾಹ್ಯಾಕಾಶ ಸಂಸ್ಥೆಯು X ಹ್ಯಾಂಡಲ್‌ ನಿಂದ ಈ ಪೋಸ್ಟನ್ನು ಅಳಿಸಿದೆ.

ಐತಿಹಾಸಿಕ ಸಾಧನೆಯಲ್ಲಿ ಭಾರತದ ಮೂನ್ ಮಿಷನ್ ಚಂದ್ರಯಾನ-3 ಬುಧವಾರ ಸಂಜೆ 6.04 ಕ್ಕೆ ಚಂದ್ರನ ದಕ್ಷಿಣ ಧ್ರುವವನ್ನು ಮುಟ್ಟಿತು. ಇದರೊಂದಿಗೆ ಚಂದ್ರನನ್ನು ತಲುಪಿದ ನಾಲ್ಕನೇ ದೇಶವಾಗಿ ಭಾರತ ಮೂಡಿಬಂತು. ಅಲ್ಲದೆ ಶಶಾಂಕನ ದಕ್ಷಿಣ ಧ್ರುವದಲ್ಲಿ ತನ್ನ ಲ್ಯಾಂಡರ್ ಇಳಿಸಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿತು.

Advertisement

ಭಾರತವು ಅತ್ಯಂತ ಕಡಿಮೆ ಖರ್ಚಿನಲ್ಲಿ ಚಂದ್ರಯಾನ ಮಿಷನ್ ಪೂರ್ಣಗೊಳಿಸಿದೆ. ಚಂದ್ರಯಾನ-3ರ ಒಟ್ಟು ಖರ್ಚು 615 ಕೋಟಿ ರೂ ಎನ್ನಲಾಗಿದ್ದು, ಇದು ಹಲವು ಬಾಲಿವುಡ್ ಚಿತ್ರಗಳ ಬಜೆಟ್ ಗಿಂತ ಕಡಿಮೆಯಿದೆ.

ಗುರುವಾರ ಸಂದರ್ಶನವೊಂದರಲ್ಲಿ ಮಾತನಾಡಿದ್ದಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌, ರೋವರ್‌ ಮತ್ತು ಲ್ಯಾಂಡರ್‌ಗಳ ಆರೋಗ್ಯ ಉತ್ತಮವಾಗಿದೆ. ಎರಡೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಇವುಗಳು ವೈಜ್ಞಾನಿಕ ಶೋಧವನ್ನು ಇನ್ನೂ ಆರಂಭಿಸಿಲ್ಲ. ಇದಕ್ಕೆ ಕೊಂಚ ಸಮಯ ಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next