Advertisement

‘ಚಂದ್ರಯಾನ-3’ಯೋಜನೆಗೆ 75 ಕೋಟಿ ರೂ. ಕೇಳಿದ ಇಸ್ರೋ

09:58 AM Dec 10, 2019 | Team Udayavani |

ಹೊಸದಿಲ್ಲಿ: ಮುಂದಿನ ವರ್ಷ ನವೆಂಬರ್‌ನಲ್ಲಿ ‘ಚಂದ್ರಯಾನ-3’ ಯೋಜನೆಯನ್ನು ಅನುಷ್ಠಾನಗೊಳಿಸಲು ಸಜ್ಜಾಗಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ), ಈ ಯೋಜನೆ ಜಾರಿಗಾಗಿ 75 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ.

Advertisement

ಕೇಂದ್ರ ಹಣಕಾಸು ಇಲಾಖೆಗೆ ಸಲ್ಲಿಸಲಾಗಿರುವ ಈ ಪ್ರಸ್ತಾವನೆಯಲ್ಲಿ ಯೋಜನೆಯ ಯಂತ್ರಗಳು, ಸಾಧನ-ಪರಿಕರಗಳು ಹಾಗೂ ಇನ್ನಿತರ ಪ್ರಮುಖ ವೆಚ್ಚಗಳಿಗಾಗಿ 60 ಕೋಟಿ ರೂ. ಹಾಗೂ ಇತರೆ ಖರ್ಚುಗಳಿಗಾಗಿ 15 ಕೋಟಿ ರೂ.ಗಳನ್ನು ನೀಡುವಂತೆ ಕೇಳಲಾಗಿದೆ.

ಅಲ್ಲದೆ, ಈ ವರ್ಷದಲ್ಲಿ ಇಸ್ರೋಕ್ಕೆ ನೀಡಲಾಗಿರುವ ಅನುದಾನಕ್ಕೆ ಹೆಚ್ಚುವರಿಯಾಗಿ ಈ ಹಣ ಬಿಡುಗಡೆ ಮಾಡುವಂತೆ ಕೇಳಿಕೊಳ್ಳಲಾಗಿದೆ. 2019-20ರ ಬಜೆಟ್‌ನಲ್ಲಿ ಇಸ್ರೋಗೆ 669 ಕೋಟಿ ರೂ. ಅನುದಾನ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next