Advertisement

ISRO ವಿಜ್ಞಾನಿ ಕಾರ್ಯಕ್ರಮ: ಮೌಲ್ಯಾ ವೈ.ಆರ್‌. ಜೈನ್‌ ಭಾಗಿ

12:03 AM May 28, 2024 | Team Udayavani |

ಮೂಡುಬಿದಿರೆ: ಭಾರತೀಯ ಬಾಹ್ಯಕಾಶ ಸಂಶೋಧನ ಸಂಸ್ಥೆ “ಇಸ್ರೋ’ ಶಾಲಾ ಮಕ್ಕಳಿಗಾಗಿ ಪ್ರತೀ ವರ್ಷವೂ ಆಯೋಜಿಸುವ ರಾಷ್ಟ್ರ ಮಟ್ಟದ ಯುವ ವಿಜ್ಞಾನಿ ಕಾರ್ಯಕ್ರಮ “ಯುವಕ’ಗೆ ಈ ಬಾರಿ ಮೂಡುಬಿದಿರೆ ಎಕ್ಸಲೆಂಟ್‌ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮೌಲ್ಯಾ ವೈ.ಆರ್‌. ಜೈನ್‌ ಆಯ್ಕೆಗೊಂಡು ಭಾಗವಹಿಸಿದ್ದಾರೆ.

Advertisement

“ಇಸ್ರೋ’ದ ವಿವಿಧ ಕೇಂದ್ರಗಳಲ್ಲಿ 2 ವಾರಗಳ ಕಾಲ ಜರಗುವ “ಯುವಕ-2024’ರಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 85,000 ಮಂದಿ ಅರ್ಜಿ ಸಲ್ಲಿಸಿದ್ದು ವಿದ್ಯಾರ್ಥಿಗಳ ಮೂರು ವರುಷಗಳ ಶೈಕ್ಷಣಿಕ, ರಾಜ್ಯ-ರಾಷ್ಟ್ರ ಮಟ್ಟದ ವೈಜ್ಞಾನಿಕ, ಕ್ರೀಡಾ ಸಾಧನೆಗಳು, ಒಲಂಪಿಯಾಡ್‌ ತತ್ಸಮಾನ ಸ್ಪರ್ಧೆಗಳಲ್ಲಿ ಪಡೆದ ರ್‍ಯಾಂಕ್‌ ಜತೆಗೆ ಮುಖ್ಯವಾಗಿ ಇಸ್ರೋ ಆಯೋಜಿಸುವ ಆನ್‌ಲೈನ್‌ ರಸಪ್ರಶ್ನೆಯಲ್ಲಿ ವಿದ್ಯಾರ್ಥಿಯ ಫಲಿತಾಂಶ ಇವೆಲ್ಲವನ್ನು ಮಾನದಂಡವನ್ನಾಗಿರಿಸಿ 250 ವಿದ್ಯಾರ್ಥಿಗಳನ್ನು ಆರಿಸಲಾಗಿದ್ದು ರಾಜ್ಯದ 12 ಮಂದಿಗಳಲ್ಲಿ ರಾಜ್ಯ ಪಠ್ಯಕ್ರಮ ಬೋಧಿಸುವ ಶಿಕ್ಷಣ ಸಂಸ್ಥೆಯಿಂದ ಆಯ್ಕೆಯಾಗಿ ಭಾಗವಹಿಸಿದ ಕರ್ನಾಟಕದ ಏಕೈಕ ವಿದ್ಯಾರ್ಥಿನಿ ಈಕೆ.

ಸಹ್ಯಾದ್ರಿ ಸೈನ್ಸ್‌ ಟ್ಯಾಲೆಂಟ್‌ ಹಂಟ್‌ ಕಾರ್ಯಕ್ರಮದಲ್ಲಿ ವಿಜ್ಞಾನ ಮಾದರಿ ತಯಾರಿ, ಜಿಲ್ಲಾ ರಾಜ್ಯ ಮಟ್ಟದ ಆನ್‌ ಲೈನ್‌-ಆಫ್‌ಲೈನ್‌ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಜತೆಗೆ ರಾಷ್ಟ್ರ, ರಾಜ್ಯಮಟ್ಟದ ಅಟಲ್‌ಮಾರಥಾನ್‌, ಇನ್‌ಸ್ಪಾಯರ್‌ ಸ್ಪರ್ಧೆಗಳಲ್ಲಿ ಭಾಗವಹಿಸಿ ನೂತನ ಸಂಶೋಧನಾತ್ಮಕ ಮಾದರಿಗಳನ್ನು ಪ್ರಸ್ತುತಪಡಿಸಿರುವ ಮೌಲ್ಯ ಇವರು ಎಕ್ಸಲೆಂಟ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್‌ಜೈನ್‌ ಹಾಗೂ ಕಾರ್ಯದರ್ಶಿ ರಶ್ಮಿತಾ ಜೈನ್‌ ಇವರ ಪುತ್ರಿ.

 

Advertisement

Udayavani is now on Telegram. Click here to join our channel and stay updated with the latest news.

Next