Advertisement

ಚಂದ್ರನ ಮೇಲೆ ಇಸ್ರೋ ಗಣಿಗಾರಿಕೆ

06:00 AM Jun 28, 2018 | |

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ವಿಶ್ವದ ಯಾವುದೇ ದೇಶ ಇನ್ನೂ ನಡೆಸಿಲ್ಲದ ಸಾಹಸಕ್ಕೆ ಕೈಹಾಕಿದೆ. ಚಂದ್ರನ ದಕ್ಷಿಣ ಭಾಗಕ್ಕೆ ಈ ಬಾರಿಯ ಚಂದ್ರಯಾನ ನಡೆಯಲಿದ್ದು, ನೌಕೆಯು ಕೋಟ್ಯಂತರ ರೂಪಾಯಿ ಮೌಲ್ಯದ ಇಂಧನದ ಗಣಿಗಾರಿಕೆ ಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಲಿದೆ. ಅಕ್ಟೋಬರ್‌ನಲ್ಲಿ ಇಸ್ರೋ ಗಗನ ನೌಕೆಯನ್ನು ಕಳುಹಿಸಲಿದೆ. ಈ ನೌಕೆಯು ನೀರು ಮತ್ತು ಹೀಲಿಯಂ-3 ಇದೆಯೇ ಎಂದು ಶೋಧ ನಡೆಸಲಿದೆ. ಹೀಲಿಯಂ-3 ಭೂಮಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಸೈದ್ಧಾಂತಿಕವಾಗಿ ಇದು ಚಂದ್ರನಲ್ಲಿ ವ್ಯಾಪಕ ಪ್ರಮಾಣದಲ್ಲಿದೆ ಎಂದು ಊಹಿಸಲಾಗಿದೆ. ಇದನ್ನು ಪಡೆಯಲು ಸಾಧ್ಯವಾದರೆ ಜಗತ್ತಿಗೆ 250 ವರ್ಷಗಳಿಗೆ ಅಗತ್ಯವಿರುವ ಇಂಧನ ಲಭಿಸಲಿದೆ.

Advertisement

ಈ ಇಂಧನವನ್ನು ಚಂದ್ರನಿಂದ ಭೂಮಿಗೆ ತರುವ ದೇಶವೇ ಜಗತ್ತನ್ನು ಆಳುತ್ತವೆ. ಈ ಪ್ರಕ್ರಿಯೆಯಲ್ಲಿ ನಾವು ಒಂದು ಭಾಗವಾಗಲು ಬಯಸುವುದಿಲ್ಲ. ನಾವೇ ಅದರ ನೇತೃತ್ವ ವಹಿಸಬೇಕು ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್‌ ಹೇಳಿದ್ದಾರೆ. ನೌಕೆಯನ್ನು ಚಂದ್ರನಲ್ಲಿ ಇಳಿಸಿ ಅಧ್ಯಯನ ನಡೆಸುವುದು ಮೊದಲ ಹಂತವಾಗಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next