Advertisement

ಗಡಿ ಕಾವಲಿಗೆ ಉಪಗ್ರಹದ ಬಲ : ಮಾ.28ರಂದು ಇಸ್ರೋದಿಂದ ಗೇಮ್‌ಚೇಂಜರ್‌ ಉಪಗ್ರಹ ಉಡಾವಣೆ

12:19 AM Mar 08, 2021 | Team Udayavani |

ಹೊಸದಿಲ್ಲಿ: ಇನ್ನು ಚೀನ ಮತ್ತು ಪಾಕಿಸ್ಥಾನ ದೇಶಗಳು ಭಾರತದೊಂದಿಗೆ ಹಂಚಿಕೊಂಡಿರುವ ಗಡಿಯಲ್ಲಿ ಕಳ್ಳಾಟ ಆಡುವ ಮುನ್ನ ಒಂದು ಕ್ಷಣ ಯೋಚಿಸಲೇಬೇಕು!

Advertisement

ಹೌದು, ಇಸ್ರೋ ಸಂಸ್ಥೆ ಮಾ. 28ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಜಿಐಸ್ಯಾ ಟ್‌-1 ಉಪಗ್ರಹವನ್ನು ಉಡಾಯಿಸುತ್ತಿದೆ. ಇದರ ಮೂಲಕ ದೇಶದ ಗಡಿಯಲ್ಲಿ ನೈಜ ಸಮಯದಲ್ಲೇ ಕಣ್ಗಾವಲು ಇಡಬಹುದಾಗಿದೆ. ನೈಸರ್ಗಿಕ ವಿಕೋಪಗಳಂತ ಸಂದರ್ಭದಲ್ಲೂ ಮುನ್ಸೂಚನೆ ನೀಡಲು ಸಹಕಾರಿಯಾಗಲಿದೆ.

ಗೇಮ್‌ ಚೇಂಜರ್‌ ಉಪಗ್ರಹ
ಇಸ್ರೋದ ಈ ಜಿಐಸ್ಯಾಟ್‌-1 ಉಪಗ್ರಹ ಭಾರತದ ಮಟ್ಟಿಗೆ ಗೇಮ್‌ ಚೇಂಜರ್‌ ಆಗಲಿದೆ ಎಂಬುದು ಸಂಸ್ಥೆಯ ಅಧಿಕಾರಿಗಳ ಅಭಿಪ್ರಾಯ. ಇದು ಹೈ ರೆಸಲ್ಯೂಶನ್‌ ಕೆಮರಾಗಳನ್ನು ಹೊಂದಿದ್ದು, ದೇಶದ ಮೂಲೆ ಮೂಲೆಯ ಮೇಲೂ ಕಣ್ಣಿಡಬಹುದು ಎಂದು ಇಸ್ರೋ ಮೂಲಗಳು ತಿಳಿಸಿವೆ.

ನೈಸರ್ಗಿಕ ವಿಕೋಪಗಳ ಮುನ್ಸೂಚನೆ
ಈ ಉಪಗ್ರಹ ರಿಯಲ್‌ ಟೈಮ್‌ನಲ್ಲಿ ವಿಶಾಲವಾದ ಭೂಭಾಗದ ದೃಶ್ಯ ಸೆರೆಹಿಡಿದು ನಿರ್ದಿಷ್ಟ ಪ್ರದೇಶದಲ್ಲಿ ಉಂಟಾಗುವ ವ್ಯತ್ಯಾಸಗಳ ಬಗ್ಗೆ ಮುನ್ಸೂಚನೆಯನ್ನೂ ನೀಡಲಿದೆ.

ಉಡಾವಣೆಯ ವಿವರ
ಕಳೆದ ವರ್ಷದ ಮಾ. 5ರಂದೇ ಈ ಉಪಗ್ರಹ ಉಡಾವಣೆಯಾಗಬೇಕಾಗಿತ್ತು. ತಾಂತ್ರಿಕ ತೊಂದರೆಗಳಿಂದಾಗಿ ಮುಂದೂಡಿಕೆಯಾಗಿತ್ತು. ಈ ತಿಂಗಳ 28ರಂದು ಭೂ ಮೇಲ್ಮೆ„ಯ 36 ಸಾವಿರ ಕಿ.ಮೀ. ದೂರದಲ್ಲಿ ಇಸ್ರೋ ಈ ಉಪಗ್ರಹವನ್ನು ಕಕ್ಷೆಗೆ ಇಡಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next