Advertisement

ನಭಕ್ಕೇರಿದ ಸಂವಹನ ಉಪಗ್ರಹ ಜಿಸ್ಯಾಟ್‌ 11

06:00 AM Dec 06, 2018 | Team Udayavani |

ಹೊಸದಿಲ್ಲಿ: ಭಾರತದ ಅತಿ ಹೆಚ್ಚು ತೂಕದ ಜಿಸ್ಯಾಟ್‌ 11 ಐರೋಪ್ಯ ಬಾಹ್ಯಾಕಾಶ ಏಜೆನ್ಸಿಯ ಫ್ರೆಂಚ್‌ ಕೌರೌ ಉಡಾವಣಾ ನೆಲೆಯಿಂದ ಬುಧವಾರ ಬೆಳಗಿನ ಜಾವ 2.07 ಕ್ಕೆ ಉಡಾವಣೆಯಾಗಿದೆ. ಏರಿಯಾನೆ 5 ರಾಕೆಟ್‌ ಬಳಸಿ ಇದನ್ನು ಉಡಾವಣೆ ಮಾಡಲಾಗಿದ್ದು, ದೇಶದ ಇಂಟರ್‌ನೆಟ್‌ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣವಾಗಲಿದೆ. ಇಸ್ರೋದ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಅಭಿನಂದನೆ ತಿಳಿಸಿದ್ದಾರೆ.

Advertisement

ಅಂತರ್ಜಾಲ ಕ್ರಾಂತಿ
ಜಿಸ್ಯಾಟ್‌ 11 ಉಡಾವಣೆಯ ನಂತರ, ಜಿಸ್ಯಾಟ್‌ 20 ಮಂದಿನ ವರ್ಷ ಉಡಾವಣೆಗೊಳ್ಳಲಿದೆ. ಇನ್ನು ಜಿಸ್ಯಾಟ್‌ 19 ಹಾಗೂ ಜಿಸ್ಯಾಟ್‌ 29 ಅನ್ನು ಈಗಾಗಲೇ ಉಡಾವಣೆ ಮಾಡಲಾಗಿದೆ. ಈ ನಾಲ್ಕೂ ಉಪಗ್ರಹಗಳು ದೇಶಾದ್ಯಂತ ಅಧಿಕ ವೇಗದ ಇಂಟರ್‌ನೆಟ್‌ ಒದಗಿಸುತ್ತವೆ.

ಸೂಕ್ಷ್ಮಅಲೆಗಳನ್ನು ಬಿತ್ತರಿಸುವ ಉಪಗ್ರಹ
ಸೂಕ್ಷ್ಮ ಅಲೆಗಳ ಮರುಬಳಕೆಯ ತಂತ್ರಜ್ಞಾನದಿಂದ ಇಡೀ ದೇಶಕ್ಕೆ ಇಂಟರ್ನೆಟ್‌ ಸಂಪರ್ಕ. ಜಿಎಸ್‌ಎಲ್‌ವಿಯಿಂದ ಕೇವಲ 4 ಟನ್‌ವರೆಗಿನ ಸ್ಯಾಟಲೈಟ್‌ ಉಡಾವಣೆ ಮಾಡಬಹುದಾದ್ದರಿಂದ ಐರೋಪ್ಯ ಬಾಹ್ಯಾಕಾಶ ಏಜೆನ್ಸಿ ಬಳಕೆ ಮಾಡಿದ ಇಸ್ರೋ

5854 ಕಿಲೋ   - ತೂಕ

36,000 ಕಿ.ಮೀ ಎತ್ತರದಲ್ಲಿ ಸುತ್ತಲಿರುವ 600 ಕೋಟಿ ರೂ. ವೆಚ್ಚದ ಸ್ಯಾಟಲೈಟ್‌
ಬೃಹತ್‌ ಸ್ಯಾಟಲೈಟ್‌ನ ಒಂದು ಸೋಲಾರ್‌ ಪ್ಯಾನೆಲ್‌ ಸೆಡಾನ್‌ ಕಾರ್‌ನಷ್ಟು ಉದ್ದ
ಕೆಯು ಬ್ಯಾಂಡ್‌ ಮತ್ತು ಕೆಎ ಬ್ಯಾಂಡ್‌ ಫ್ರೀಕ್ವೆನ್ಸಿಗಳ 40 ಟ್ರಾನ್ಸ್‌ಪಾಂಡರ್‌ಗಳಿಂದಾಗಿ ಸೆಕೆಂಡಿಗೆ 14 ಜಿಬಿ ವೇಗದ ಇಂಟರ್‌ನೆಟ್‌ ಒದಗಿಸುವ ಸಾಮರ್ಥ್ಯ
ಸತತ 15 ವರ್ಷಗಳವರೆಗೆ ಭೂಮಿಗೆ ಇಂಟರ್‌ನೆಟ್‌ ಒದಗಿಸುವ ಸ್ಯಾಟಲೈಟ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next