Advertisement

ಖಾಸಗಿ ಸಹಯೋಗದಲ್ಲಿ ರಾಕೆಟ್‌: ಇಸ್ರೋ ಇಂಗಿತ

06:20 AM Aug 22, 2017 | Team Udayavani |

ಹೊಸದಿಲ್ಲಿ: ಜಗತ್ತಿನಲ್ಲಿ ವಾಣಿಜ್ಯಿಕ ಉಪಗ್ರಹ ಉಡಾವಣೆಗೆ ಹೆಸರಾಗಿರುವ ಇಸ್ರೋ, ಈ ನಿಟ್ಟಿನಲ್ಲಿ ಮತ್ತಷ್ಟು ಮುಂದುವರಿಯಲು ಇದೀಗ ತನ್ನ ಪಿಎಸ್‌ಎಲ್‌ವಿ ರಾಕೆಟ್‌ ನಿರ್ಮಾಣಕ್ಕೆ ದೇಶೀಯ ಕಂಪನಿಗಳ ಸಹಯೋಗ ಬಯಸಿದೆ. ಇದರಿಂದ ಅಲ್ಪಾವಧಿಯಲ್ಲಿ ಹೆಚ್ಚೆಚ್ಚು ಉಪಗ್ರಹ ಉಡಾವಣೆಗಳನ್ನು ಮಾಡುವ ಯೋಜನೆ ಅದರದ್ದು. ಪಿಎಸ್‌ಎಲ್‌ವಿ ನಿರ್ಮಾಣ ದೇಶೀಯ ಕಂಪನಿಗಳೊಂದಿಗೆ ಮಾಡುವ ಇರಾದೆಯಿದೆ. ಇದರಿಂದ ಜಾಗತಿಕವಾಗಿ ಮತ್ತಷ್ಟು ಉಪಗ್ರಹ ಉಡಾವಣೆ ಗುತ್ತಿಗೆ ಪಡೆಯಬಹುದು ಎಂಬ ಲೆಕ್ಕಾಚಾರವಿದೆ ಎಂದು ಇಸ್ರೋ ಅಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್‌ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ವರ್ಷಕ್ಕೆ 24 ರಾಕೆಟ್‌ ಉಡಾವಣೆಗೆ ಯೋಜಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next