ಮಲಯಾಳಂನಲ್ಲಿ “ನಿಲುವು ಕುಡಿಚ್ಚ ಸಿಂಹಗಳ್”(ಚಂದ್ರನ ಬೆಳಕನ್ನು ಸೇವಿಸಿದ ಸಿಂಹಗಳು) ಹೆಸರಿನಲ್ಲಿ ಸೋಮನಾಥ್ ಅವರ ಆತ್ಮಚರಿತ್ರೆಯನ್ನು ಕೇರಳ ಮೂಲದ ಲಿಬಿ ಪಬ್ಲಿಕೇಶನ್ಸ್ ಹೊರತರುತ್ತಿದ್ದು, ನವೆಂಬರ್‌ನಲ್ಲಿ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ.
Advertisement
ತಮ್ಮ ವಿದ್ಯಾರ್ಥಿ ಜೀವನದಲ್ಲಿ ಹಾಸ್ಟೆಲ್ ವೆಚ್ಚ ತಗ್ಗಿಸಲು ಸಾಧಾರಣ ಕೊಠಡಿಯಲ್ಲಿ ವಾಸ, ದುಡ್ಡು ಉಳಿಸಲು ಸಾರಿಗೆ ಬಸ್ ಬದಲು ಹಳೆಯ ಸೈಕಲ್‌ನಲ್ಲಿ ಸಂಚಾರ.. ಹೀಗೆ ಅನೇಕ ಸಂಗತಿಗಳು ಸೋಮನಾಥ್ ಅವರ ಆತ್ಮಚರಿತ್ರೆಯಲ್ಲಿ ಅಡಕವಾಗಿದೆ.
“ಈ ಪುಸ್ತಕವು ನನ್ನ ಜೀವನದ ಕಥೆಯನ್ನು ಜನರಿಗೆ ತಿಳಿಸುವ ಉದ್ದೇಶ ಹೊಂದಿಲ್ಲ. ಬದಲಾಗಿ ಜೀವನದಲ್ಲಿ ಹಲವು ಸಮಸ್ಯೆಗಳ ನಡುವೆಯೂ ಕನಸುಗಳನ್ನು ಬೆನ್ನತ್ತಲು ಯುವಕರಿಗೆ ಪ್ರೇರೇಪಿಸುವ ಉದ್ದೇಶವನ್ನು ಹೊಂದಿದೆ’ ಎಂದು ಸೋಮನಾಥ್ ಹೇಳಿದ್ದಾರೆ.