ಹೊಸದಿಲ್ಲಿ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್‌ಗೆ ಕ್ಯಾನ್ಸರ್‌ನಿಂದ ಗುಣಮುಖರಾಗಿದ್ದಾರೆ. ಆದಿತ್ಯ ಎಲ್-1 ಉಡಾವಣೆಯ ದಿನವೇ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ಕ್ಯಾನ್ಸರ್ ದೃಢಪಟ್ಟಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ವಿಷಯವನ್ನು ಸ್ವತಃ ಸೋಮನಾಥ್ ಮಾಧ್ಯಮವೊಂದರ ಜತೆಗೆ ಮಾತನಾಡುವಾಗ ಹಂಚಿಕೊಂಡಿದ್ದಾರೆ.
“ಚಂದ್ರಯಾನ-3 ಯೋಜನೆ ವೇಳೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿತ್ತು. ಆರೋಗ್ಯ ತಪಾಸಣೆ ಹೊಟ್ಟೆಯಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಈ ವಿಷಯ ಆದಿತ್ಯ ಎಲ್-1 ಉಡಾವಣೆ ದಿನವೇ ಗೊತ್ತಾಯಿತು’ ಎಂದರು.
ದೇಶದ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಶೀಘ್ರ ಆರಂಭ
ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆಯಡಿ ಮೊತ್ತಮೊದಲ ಬಾಹ್ಯಾಕಾಶ ನಿಲ್ದಾಣ ನಿರ್ಮಾಣಕ್ಕೆ ಆದಷ್ಟು ಬೇಗ ಇಸ್ರೋ ಅಡಿ ಇಡಲಿದೆ. ಮುಂದಿನ ಕೆಲವು ವರ್ಷಗಳಲ್ಲಿ ಬಾಹ್ಯಾಕಾಶ ನಿಲ್ದಾಣದ ಮೊದಲ ಮಾದರಿಯನ್ನು ಅನಾವರಣ ಗೊಳಿಸುವುದಾಗಿ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋಗೆ ಗುರಿ ನಿಗದಿಪಡಿಸಿದ್ದು 2035ನೇ ಇಸ್ವಿ ಒಳಗೆ ಅಂತರಿಕ್ಷ ನಿಲ್ದಾಣ ಕಾರ್ಯಾರಂಭ ಮಾಡಲಿದೆ. ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಸಂಬಂಧ ಇಸ್ರೋ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಈಗಾಗಲೇ ಆರಂಭಿಸಿದೆ. ಕೆಳಭೂ ಪಥದಲ್ಲಿ ಭಾರತೀಯ ಅಂತರಿಕ್ಷ ನಿಲ್ದಾಣ ನಿಯೋಜಿಸಲಾಗುತ್ತಿದ್ದು ಇಬ್ಬರು ಅಥವಾ ನಾಲ್ವರು ಗಗನಯಾನಿಗಳು ಉಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ, ಬಾಹ್ಯಾಕಾಶ ನಿಲ್ದಾಣದ ಅಂತಿಮ ಗಾತ್ರ ಕೊನೆಗೆ 400 ಟನ್‌ವರೆಗೂ ತಲುಪಬಹುದು ಎನ್ನಲಾಗಿದೆ. ಸ್ಪೇಸ್ ವಿಷನ್-2047ರ ಅಡಿ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ, 2040ರ ಒಳಗೆ ಚಂದ್ರನಲ್ಲಿಗೆ ಮಾನವನನ್ನು ಕಳುಹಿ ಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಗುರಿಗಳಾಗಿವೆ.