Advertisement

Israeli Southern West Bank; ಗುಂಡಿನ ದಾಳಿ: ಇಸ್ರೇಲಿ ಮಹಿಳೆ ಸಾವು

08:14 PM Aug 21, 2023 | Team Udayavani |

ಜೆರುಸಲೇಮ್‌: ಇಸ್ರೇಲ್‌ನ ಪಶ್ಚಿಮ ದಂಡೆಯಲ್ಲಿ ಶಂಕಿತ ಪ್ಯಾಲೆಸ್ತೇನಿ ದಾಳಿಕೋರನೊಬ್ಬ ಸೋಮವಾರ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಇದರಿಂದ ಇಸ್ರೇಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

Advertisement

ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳಿನಿಂದ ಇಸ್ರೇಲ್‌ನ ಪಶ್ಚಿಮ ದಂಡೆಯಲ್ಲಿ ಪ್ಯಾಲೆಸ್ತೇನಿ ಉಗ್ರರು, ಇಸ್ರೇಲಿ ಭದ್ರತಾ ಪಡೆಗಳು ಹಾಗೂ ಯಹೂದಿ ಮೂಲಭೂತವಾದಿಗಳ ನಡುವೆ ತಿಕ್ಕಾಟ ನಡೆಯುತ್ತಿದೆ.

ಸೋಮವಾರದ ದಾಳಿಯು ಇದರ ಮುಂದುವರಿದ ಭಾಗವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next