Advertisement

ಗೆಳೆಯನ ಮೃತದೇಹದ ಅಡಿಯಲ್ಲಿ ಸತ್ತಂತೆ ನಟಿಸಿ ಹಮಾಸ್ ಉಗ್ರರಿಂದ ಬಚಾವಾದ ಇಸ್ರೇಲ್ ಯುವತಿ

04:19 PM Nov 06, 2023 | Team Udayavani |

ಜೆರುಸೆಲಮ್: ಅಕ್ಟೋಬರ್ 7 ರಂದು ಹಮಾಸ್ ಬಂಡುಕೋರರು ನಡೆಸಿದ ದಾಳಿಯಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದಾರೆ ಅಷ್ಟು ಮಾತ್ರವಲ್ಲದೆ ಹಮಾಸ್ ಬಂಡುಕೋರರ ತಂಡ ದಕ್ಷಿಣ ಇಸ್ರೇಲ್ ನಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮಕ್ಕೆ ಪ್ರವೇಶಿಸಿ ಮನಬಂದಂತೆ ಗುಂಡಿನ ದಾಳಿ ನಡೆಸಿ ನೂರಾರು ಮಂದಿಯನ್ನು ಹತ್ಯೆಗೈದಿದ್ದಾರೆ ಅಲ್ಲದೆ ನೂರಾರು ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಆದರೆ ಇದರ ನಡುವೆ ಇಸ್ರೇಲ್ ಯುವತಿಯೊಬ್ಬಳು ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ ತನ್ನ ಗೆಳೆಯನನ್ನು ಕಳೆದುಕೊಂಡಿದ್ದಾಳೆ ಅಲ್ಲದೆ ಗುಂಡಿನ ದಾಳಿಯಿಂದ ತಾನು ಬಚಾವಾಗಿ ಬಂದಿದ್ದು, ಉಗ್ರರ ದಾಳಿಯಿಂದ ತಪ್ಪಿಸಿಕೊಂಡು ಬಂದ ರೋಚಕ ಕತೆಯನ್ನು ಯುವತಿ ಹೇಳಿಕೊಂಡಿದ್ದಾಳೆ.

Advertisement

27 ವರ್ಷದ ಮಾಡೆಲ್ ನೋಮ್ ಮಝಲ್ ಬೆನ್ ಹಾಗೂ ಆಕೆಯ ಗೆಳೆಯ ಡೇವಿಡ್ ದಕ್ಷಿಣ ಇಸ್ರೇಲ್ ನಲ್ಲಿ ನಡೆಯುತ್ತಿದ್ದ ಸಂಗೀತ ಉತ್ಸವಕ್ಕೆ ತೆರಳಿದ್ದರು ಈ ವೇಳೆ ಪ್ಯಾಲೆಸ್ಟೇನ್ ಗುಂಪು ದಿಡೀರ್ ದಾಳಿ ನಡೆಸಿ ಮನಬಂದನಂತೆ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದಾರೆ ಅಲ್ಲಿದ್ದ ಜನ ಕಕ್ಕಾಬಿಕ್ಕಿಯಾಗಿ ಒಡಲು ಪ್ರಾರಂಭಿಸಿದ್ದಾರೆ ಆದರೆ ಹಮಾಸ್ ಬಂಡುಕೋರರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ತಪ್ಪಿಸಿಕೊಳ್ಳುವುದು ಸುಲಭದ ಮಾತು ಆಗಿರಲಿಲ್ಲ, ಉಗ್ರರರು ಗುಂಡಿನ ದಾಳಿ ನಡೆಸುತ್ತಿದ್ದಂತೆ ನಾನು ಮತ್ತೆ ಡೇವಿಡ್ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದೆವು ಮೊದಲು ತಾವು ಬಂದಿದ್ದ ಕಾರಿನಲ್ಲಿ ಪಾರಾಗಲು ಯತ್ನಿಸಿದೆವು ಆದರೆ ಅದು ಸಾಧ್ಯವಾಗಲಿಲ್ಲ ಬಳಿಕ ಅಲ್ಲಿದ್ದ ಕಂಟೈನರ್ ಬಳಿ ತೆರಳಿ ನಾವು ಅವಿತುಕೊಂಡು ಕುಳಿತೆವು ಆದರೆ ಬಂಡುಕೋರರು ಮನ ಬಂದಂತೆ ಗುಂಡಿನ ದಾಳಿ ನಡೆಸುತ್ತಿದ್ದ ಪರಿಣಾಮ ಬದುಕುಳಿಯುವುದು ಕಷ್ಟ ಸಾಧ್ಯ ಎಂಬುದು ಗಮನಕ್ಕೆ ಬಂತು.

ಕೂಡಲೇ ಅಲ್ಲಿದ್ದ ಎರಡು ಕಂಟೈನರ್ ಗಳನ್ನೂ ಗಮನಿಸಿದ ನಾವು ಅದರಲ್ಲಿ ಒಂದನ್ನು ಬಂಡುಕೋರರು ಗ್ರಾನೈಟ್ ದಾಳಿ ನಡೆಸಿ ಸ್ಪೋಟಿಸಿದ್ದರು ಈ ವೇಳೆ ಅದರೊಳಗೆ ಅವಿತ್ತಿದ್ದ ಹಲವು ಮಂದಿ ಮೃತಪಟ್ಟರು. ಇನ್ನು ನಮ್ಮ ಬಳಿ ಬದುಕುಳಿಯಲು ಬೇರೆ ಮಾರ್ಗ ಇಲ್ಲ ಕೊನೆಯದಾಗಿ ಕಂಟೈನರ್ ಒಳಗೆ ಅವಿತು ಕುಳಿತುಕೊಳ್ಳುವ ಎಂದು ಹೇಳಿ ಅಲ್ಲಿಗೆ ತೆರಳಿ ಅವಿತು ಕುಳಿತೆವು ಈ ವೇಳೆ ಹೊರಗಿನಿಂದ ಉಗ್ರರು ಗುಂಡಿನ ದಾಳಿ ನಡೆಸುತ್ತಿರುವ ಸದ್ದು ಕೇಳುತ್ತಿತ್ತು ಅಲ್ಲದೆ ಅಲ್ಲಿದ್ದ ಜನ ಅಲ್ಲಾಹು ಅಕ್ಬರ್ ಎಂದು ಕೂಗುತ್ತಿದ್ದರು ಈ ವೇಳೆ ಯುವತಿಯೊಬ್ಬಳು ನನ್ನನ್ನು ಕೊಲ್ಲಬೇಡಿ ಬಿಟ್ಟುಬಿಡಿ ಎಂದು ಕೂಗುತ್ತಿರುವುದು ಕೇಳುತ್ತಿತ್ತು ಅಷ್ಟೋತ್ತಿಗೆ ಆಕೆಯನ್ನು ಬಂಡುಕೋರರು ಸಾಯಿಸದೆ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ.

ಇಷ್ಟೆಲ್ಲ ಎಡಿಎ ಬಳಿಕ ಓರ್ವ ಬಂಡುಕೋರ ನಾವಿದ್ದ ಕಂಟೈನರ್ ಬಳಿ ಬಂದಿದ್ದಾನೆ ಇದನ್ನು ಕಂಡ ಗೆಳೆಯ ಡೇವಿಡ್ ತನ್ನನ್ನು ಅಲ್ಲಿ ಅದಾಗಲೇ ಸಾವನ್ನಪ್ಪಿದ್ದ ಜನರ ಅಡಿಯಲ್ಲಿ ಅವಿತು ಕೊಳ್ಳುವಂತೆ ಹೇಳಿದ್ದಾನೆ ಅದರಂತೆ ತಾನು ಸತ್ತಂತೆ ನಟಿಸಿದೆ ಈ ವೇಳೆ ಬಂಡುಕೋರ ಕಂಟೈನರ್ ಒಳಗೆ ಜಿಗಿದು ಅಲ್ಲಾಹು ಅಕ್ಬರ್ ಎಂದು ಹೇಳಿ ಗುಂಡಿನ ದಾಳಿ ನಡೆಸಿದ್ದಾನೆ ಈ ವೇಳೆ ನನ್ನ ಗೆಳೆಯ ಡೇವಿಡ್ ಗುಂಡಿನ ದಾಳಿಗೆ ಸಿಲುಕಿ ಮೃತಪಟ್ಟ ಇದಾದ ಬಳಿಕ ಇನ್ನೊಂದು ಸುತ್ತು ಗುಂಡಿನ ದಾಳಿ ನಡೆಸಿದ ವೇಳೆ ನನ್ನ ಸೊಂಟದ ಭಾಗಕ್ಕೆ ಗುಂಡು ತಗುಲಿ ಗಾಯವಾಗಿತ್ತು ಆದರೂ ನೋವಾಗದ ರೀತಿಯಲ್ಲಿ ಸತ್ತಂತೆ ನಟಿಸಿ ಹೇಗೋ ಅಲ್ಲಿಂದ ಪಾರಾದೆ ಎಂದು ನೋಮ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಕುಡಿದ ಮತ್ತಿನಲ್ಲಿ ಹಾವಿನ ಜತೆ ಹುಚ್ಚಾಟವಾಡಿ ಕೊನೆಯುಸಿರೆಳೆದ ಯುವಕ

Advertisement
Advertisement

Udayavani is now on Telegram. Click here to join our channel and stay updated with the latest news.

Next