ಟೆಲ್ ಅವಿವ್: ಹಮಾಸ್‌ನೊಂದಿಗೆ ಇಸ್ರೇಲ್ ನಡೆಸುತ್ತಿರುವ ಯುದ್ಧವು ಆರನೇ ವಾರಕ್ಕೆ ಪ್ರವೇಶಿಸುತ್ತಿದ್ದಂತೆ ಗಾಜಾ ಪಟ್ಟಿಯನ್ನು ಆಳುತ್ತಿರುವ ಹಮಾಸ್‌ನ ಸಂಸತ್ ಕಟ್ಟಡವನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ವಶಪಡಿಸಿಕೊಂಡಿವೆ ಎಂದು ಇಸ್ರೇಲ್ ಸೇನೆಯ ಗೋಲಾನಿ ಬ್ರಿಗೇಡ್ ತಿಳಿಸಿದ್ದಾರೆ.
ಯುದ್ಧ ಆರಂಭವಾದಾಗಿನಿಂದ ಗಾಜಾದ 2.3 ಮಿಲಿಯನ್ ಜನಸಂಖ್ಯೆಯ ಮೂರನೇ ಎರಡರಷ್ಟು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ವರದಿ ತಿಳಿಸಿದೆ.
ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ಗುಂಪು ಮಾರಣಾಂತಿಕ ದಾಳಿ ನಡೆಸಿತ್ತು ಇದಾದ ಬಳಿಕ ಹಮಾಸ್ ಭಯೋತ್ಪಾದಕರನ್ನು ಹತ್ತಿಕ್ಕಲು ಇಸ್ರೇಲ್‌ನ ಮಿಲಿಟರಿ ಗಾಜಾ ನಗರದ ಮೇಲೆ ತನ್ನ ದಾಳಿಯನ್ನು ನಡೆಸಲು ಆರಂಭಿಸಿತು. ಅದರಂತೆ ಇಸ್ರೇಲ್ ಪಡೆ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಬಂಡುಕೋರರ ಅಡಗುತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಮುಂದಾಗಿದೆ.
ಕೆಲವು ದಿನಗಳ ಹಿಂದೆ ಇಸ್ರೇಲ್ ಪಡೆ ಗಾಜಾ ನಗರವನ್ನು ಸುತ್ತುವರೆದಿತ್ತು ಇದೀಗ ಗಾಜಾದಲ್ಲಿರುವ ಸಂಸತ್ ಕಟ್ಟಡವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.
ಇದನ್ನೂ ಓದಿ: Tunnel Collapse: ಉತ್ತರಕಾಶಿ ಸುರಂಗ ಕುಸಿತ: ರಕ್ಷಣಾ ತಂಡದಿಂದ ಮುಂದುವರೆದ ಕಾರ್ಯಾಚರಣೆ