Advertisement
ಇರಾನ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ದಾಳಿ ನಡೆಸಿದ್ದು ಲೆಬನಾನ್ ಹಾಗೂ ಗಾಜಾ ಪಟ್ಟಿಯ ಮೇಲೆ ಬಾಂಬ್ ಸುರಿಮಳೆ ಮಾಡಿದೆ. ಗಾಜಾ ಪಟ್ಟಿಯ ಮೇಲೂ ದಾಳಿ ನಡೆಸಿದ್ದು ಹಮಾಸ್ ಮುಖ್ಯಸ್ಥ ರಾವಿ ಮುಷ್ತಾಹನನ್ನು ಹತ್ಯೆ ಮಾಡಿದ್ದೇವೆ ಎಂದು ಇಸ್ರೇಲ್ ಸೇನೆ ಹೇಳಿದೆ. ಇಸ್ರೇಲ್ ನಡೆಸಿರುವ ದಾಳಿಯಿಂದಾಗಿ ಸುಮಾರು 12 ಲಕ್ಷ ಮಂದಿಯನ್ನು ಲೆಬನಾನ್‌ನಿಂದ ಸ್ಥಳಾಂತರಿಸಲಾಗಿದೆ ಎಂದು ಲೆಬನಾನ್ ಪ್ರಧಾನಿ ನಜೀಬ್ ಮಿಕಾತಿ ಹೇಳಿದ್ದಾರೆ.ಹಮಾಸ್ ನಾಯಕನ ಹತ್ಯೆ: ಗಾಜಾ ಪಟ್ಟಿಯಲ್ಲಿ ಅಡಗಿಕೊಂಡಿರುವ ಹಮಾಸ್ ನಾಯಕರನ್ನು ಗುರಿ ಯಾಗಿಸಿ ಇಸ್ರೇಲ್ ವಾಯುದಾಳಿ ನಡೆಸಿದ್ದು, ಗಾಜಾ ಸರಕಾರದ ಮುಖ್ಯಸ್ಥ ರಾವಿ ಮುಷ್ತಾಹ ಹಾಗೂ ಇತರ ನಾಯಕರು ಹತ್ಯೆಗೀಡಾಗಿದ್ದಾರೆ. ಉತ್ತರ ಗಾಜಾದ ನೆಲಮಾಳಿಗೆಯಲ್ಲಿ ಇವರೆಲ್ಲರೂ ಅವಿತುಕೊಂಡಿದ್ದರು ಎಂದು ಇಸ್ರೇಲ್ ಸೇನೆ ಹೇಳಿದೆ.
Related Articles
ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಯಾಗಿ ಯೆಮನ್ ಹೌತಿ ಉಗ್ರರು ಇಸ್ರೇಲ್‌ನ ಟೆಲ್ ಅವೀವ್ ಮೇಲೆ ಡ್ರೋನ್ ದಾಳಿ ನಡೆಸಿ ದ್ದಾರೆ. ಉಗ್ರರು ಲೆಬನಾನ್ ಮತ್ತು ಪ್ಯಾಲೆಸ್ತೀನ್‌ಗೆ ಬೆಂಬಲ ನೀಡುತ್ತಿದ್ದೇವೆ. ಇಸ್ರೇಲ್‌ನವರಿಗೆ ಈ ದಾಳಿಯನ್ನು ಗುರಿತಿಸಲು ಎಂದು ಹೇಳಿದ್ದಾರೆ.
Advertisement
ಭಯವಾಗುತ್ತಿದೆ: ಇಸ್ರೇಲ್‌ನಲ್ಲಿರುವ ಭಾರತೀಯರುಇಸ್ರೇಲ್ನಲ್ಲಿ ಬದುಕುವುದು ಕಷ್ಟವಾಗುತ್ತಿದೆ. ಈ ಮೊದಲಿಗಿಂತಲೂ ಈಗ ಇಲ್ಲಿ ಹೆಚ್ಚು ಭಯ ವಾಗುತ್ತಿದೆ’ ಎಂದು ತೆಲಂಗಾಣ ಮೂಲದ ವಿದ್ಯಾರ್ಥಿ ರಾಜೇಶ್ ಮೆಡಿಚೆರ್ಲಾ ಸಹಿತ ಹಲವು ಭಾರತೀಯರು ಹೇಳಿದ್ದಾರೆ. ಇರಾಕ್‌ನಲ್ಲಿ 100ಕ್ಕೂ ಹೆಚ್ಚು ಮಕ್ಕಳಿಗೆ ನಸ್ರಲ್ಲಾ ಹೆಸರು!
ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಸಾವಿನ ಬಳಿಕ ಇರಾಕ್‌ನಲ್ಲಿ 100ಕ್ಕೂ ಹೆಚ್ಚು ಮಕ್ಕಳಿಗೆ ನಸ್ರಲ್ಲಾ ಎಂದು ನಾಮಕರಣ ಮಾಡಲಾಗಿದೆ. ಇದು ಶಿಯಾ ಮುಸ್ಲಿಮರ ಮೇಲೆ ನಸ್ರಲ್ಲಾ ಬೀರಿದ್ದ ಪ್ರಭಾವವನ್ನು ತೋರಿಸುತ್ತದೆ ಎಂದು ಹೇಳಲಾಗಿದೆ. ಇರಾಕ್‌ನ ಪ್ರಧಾನಿ ಮೊಹಮ್ಮದ್ ಶಿಯಾ ಅಲ್ ಸುದಾನಿ ನಸ್ರಲ್ಲಾನನ್ನು ಹುತಾತ್ಮ ಎಂದಿದ್ದಾರೆ. ಇರಾನ್ ಮೇಲೆ ಇಸ್ರೇಲ್‌ದಾಳಿ ಮಾಡಲ್ಲ: ಬೈಡೆನ್
ವಾಷಿಂಗ್ಟನ್: ಇರಾನ್ ಮೇಲೆ ಇಸ್ರೇಲ್ ಪ್ರತಿ ದಾಳಿ ನಡೆಸಲ್ಲ. ದಾಳಿಗೆ ಅವಕಾಶ ಮಾಡಿ ಕೊಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇಸ್ರೇಲ್‌ಗೆ ಅಮೆರಿಕ ಬುದ್ಧಿಮಾತು ಹೇಳಲಿದೆ ಎಂದು ಹೇಳಿದ್ದಾರೆ ಎಂದು ಶ್ವೇತಭವನದ ಪ್ರಕಟನೆ ತಿಳಿಸಿದೆ.