Advertisement

ಇಸ್ರೇಲ್‌ ಕ್ಯಾಬಿನೆಟ್‌ನಲ್ಲಿ ಹೆಚ್ಚಾದ ಸಲಿಂಗಿ ಸಂಸದರ ಸಂಖ್ಯೆ

06:26 PM Jun 21, 2020 | sudhir |

ಜೆರುಸಲೆಮ್‌ (ಇಸ್ರೇಲ್‌): ಕ್ಯಾಬಿನೆಟ್‌ ಸದಸ್ಯರಿಗೆ ತಮ್ಮ ಸ್ಥಾನಗಳನ್ನು ಬಿಟ್ಟುಕೊಡಲು ಅವಕಾಶ ನೀಡುವ ಹೊಸ ನಿಯಮಗಳು ಜಾರಿಯಾದ ಅನಂತರದ ದಿನಗಳಲ್ಲಿ ಇಸ್ರೇಲ್‌ ಅತೀ ಹೆಚ್ಚು ಸಲಿಂಗಿ ಸಂಸದರನ್ನು ಹೊಂದಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

Advertisement

120 ಸಂಸದರ ಬಲಾಬಲ ಹೊಂದಿರುವ ಇಸ್ರೇಲ್‌ ಸೆನೆಟ್‌ನಲ್ಲಿ 5 ಪಕ್ಷಗಳಿಂದ ಆರು ಸಲಿಂಗಿ ಸಂಸದರು ಸೇವೆಗೈದಿದ್ದಾರೆ ಎಂದು ಮಾಧ್ಯಮ ವರದಿ ಉಲ್ಲೇಖ ಮಾಡಿದ್ದು, ಯೋರಾಯ್‌ ಲಹವ್‌-ಹರ್ಟ್‌ಜಾನೊ ಅವರು ಮುಂದಿನ ವಾರದ ಪ್ರಮಾಣವಚನ ಸ್ವೀಕರಿಸುವ ಮೂಲಕ ಆರನೇ ಸಲಿಂಗಿ ಸಂಸದರಾಗಲಿದ್ದಾರೆ.

ಸಮಾಜದ ಕೆಲವು ಸಂಪ್ರದಾಯವಾದಿ ವರ್ಗಗಳ ವಿರೋಧದ ಹೊರತಾಗಿಯೂ, ದೇಶ ಪ್ರಗತಿ ಪಥ ನಡೆಯುತ್ತಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದ್ದು, ಅತ್ಯಂತ ಪ್ರಗತಿಪರ ಮನೋಭಾವವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ಇನ್ನು ಕಳೆದ ವರ್ಷ, ಇಸ್ರೇಲ್‌ ತಾನು ಸಲಿಂಗಿ ಎಂದು ಘೋಷಿಸಿಕೊಂಡ ಸಂಸದನನ್ನು ಮಂತ್ರಿಯಾಗಿ ನೇಮಕಗೊಂಡಿದ್ದರು. ಜತೆಗೆ ಅದೇ ವರ್ಷದಲ್ಲಿ ಲಿಕುಡ್‌ ಪಕ್ಷದ ಅಮೀರ್ ‌ಓಹಾನಾ ಅವರು ನ್ಯಾಯಾಂಗ ಸಚಿವರಾಗಿ ಆಯ್ಕೆಗೊಂಡಿದಲ್ಲದೇ ಇಸ್ರೇಲ್‌ ಕ್ಯಾಬಿನೆಟ್‌ನ ಮೊದಲ ಸಲಿಂಗಿ ಸದಸ್ಯರಾಗಿದ್ದರು. ಪ್ರಸ್ತುತ ಅವರು ಸಾರ್ವಜನಿಕ ಭದ್ರತಾ ಸಚಿವರಾಗಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next