Advertisement

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

01:09 AM Apr 17, 2024 | Team Udayavani |

ನ್ಯೂಯಾರ್ಕ್‌: ಯುದ್ಧ, ಸಂಘರ್ಷ ಗಳಿಂದ ಬಸವಳಿದಿರುವ ಜಗತ್ತಿಗೆ ಈಗ ಮತ್ತೂಂದು ಆಘಾತ ಎದುರಾಗುವ ಎಲ್ಲ ಲಕ್ಷಣಗಳೂ ಗೋಚರಿಸಿವೆ. ಇರಾನ್‌ ಮತ್ತು ಇಸ್ರೇಲ್‌ ನಡುವೆ ಯಾವುದೇ ಕ್ಷಣದಲ್ಲಾದರೂ “ಅಣು ಯುದ್ಧ’ ಸ್ಫೋಟ ಗೊಳ್ಳುವ ಆತಂಕ ಆರಂಭವಾಗಿದೆ.

Advertisement

ತನ್ನ ಮೇಲೆ 300ಕ್ಕೂ ಹೆಚ್ಚು ಡ್ರೋನ್‌, ಕ್ಷಿಪಣಿಗಳಿಂದ ದಾಳಿ ನಡೆಸಿದ್ದ ಇರಾನ್‌ಗೆಈಗ ಪ್ರತ್ಯುತ್ತರ ನೀಡಲು ಇಸ್ರೇಲ್‌ ಸಿದ್ಧತೆ ನಡೆಸುತ್ತಿದ್ದು, ಇರಾನಿನ ಅಣು ಸ್ಥಾವರಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

“ಭದ್ರತ ಕಾರಣಕ್ಕಾಗಿ ರವಿವಾರ ಇರಾನ್‌ ತನ್ನ ಪರಮಾಣು ಸ್ಥಾವರಗಳ ಘಟಕಗಳನ್ನು ಬಂದ್‌ ಮಾಡಿತ್ತು. ಸೋಮವಾರ ಮತ್ತೆ ತೆರೆದಿದೆ. ಪರಿಸ್ಥಿತಿ ಸಂಪೂರ್ಣವಾಗಿ ಶಾಂತ ಸ್ಥಿತಿಗೆ ಮರಳುವವರೆಗೂ ನಾವು ಸೂಕ್ಷ್ಮ ವಾಗಿ ಅವಲೋಕಿಸುತ್ತೇವೆ’ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಪ್ರಧಾನ ನಿರ್ದೇಶಕ ರಾಫೇಲ್‌ ಮರಿಯಾನೊ ಗ್ರಾಸ್ಸಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next