ಹೊಸದಿಲ್ಲಿ: ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಪ್ರತೀಕಾರದ ಮಾತುಗಳನ್ನಾಡಿದ ಬೆನ್ನಲ್ಲೇ ಒಂದು ಕಡೆ ಇಸ್ರೇಲ್, ದಕ್ಷಿಣ ಲೆಬನಾನ್ನ ಹೆಜ್ಬುಲ್ಲಾ ಪ್ರದೇಶಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಿದರೆ, ಮತ್ತೂಂದೆಡೆ ಉತ್ತರ ಇಸ್ರೇಲ್ ಅನ್ನು ಗುರಿಯಾಗಿಸಿ ಉಗ್ರರು 140 ರಾಕೆಟ್ಗಳಿಂದ ದಾಳಿ ನಡೆಸಿದ್ದಾರೆ.
ಪೇಜರ್, ವಾಕಿಟಾಕಿ, ರೇಡಿಯೋ ಸ್ಫೋಟಗಳಿಗೆ ಪ್ರತಿಯಾಗಿ ಇಸ್ರೇಲ್ ವಿರುದ್ಧ ಹೆಜ್ಬುಲ್ಲಾ ಪ್ರತೀಕಾರ ಘೋಷಿ ಸಿದ ಬೆನ್ನಲ್ಲೇ ದಾಳಿ ಆರಂಭವಾಗಿದೆ.
ಇಸ್ರೇಲ್ನ ವಾಯು ಪಡೆಯು ಲೆಬನಾನ್ನ ದಕ್ಷಿಣ ಪ್ರದೇಶದ ಮೇಲೆ ಸತತ 2 ಗಂಟೆಗಳು ದಾಳಿ ನಡೆಸಿದ್ದು, ಇಸ್ರೇಲ್ನತ್ತ ಗುರಿಯಿಟ್ಟು ಸಿದ್ಧವಾಗಿದ್ದ 100ಕ್ಕೂ ಅಧಿಕ ಹೆಜ್ಬುಲ್ಲಾ ರಾಕೆಟ್ ಲಾಂಚರ್ಗಳನ್ನು ಧ್ವಂಸ ಮಾಡಿದೆ. ಉಗ್ರರ ಸ್ಥಳಗಳನ್ನು ಉಡಾಯಿಸಲಾಗಿದೆ ಎಂದು ಇಸ್ರೇಲ್ ರಕ್ಷಣ ಪಡೆ ಹೇಳಿದೆ. ಇದೇ ವೇಳೆ, ಹೆಜ್ಬುಲ್ಲಾ ವಿರುದ್ಧ ಕಾರ್ಯಾಚರಣೆಗೆ ಬೆಂಬಲ ನೀಡುವುದಾಗಿ ಅಮೆರಿಕ ಘೋಷಿಸಿದೆ.
ಈ ಮಧ್ಯೆ, ಹೆಜ್ಬುಲ್ಲಾ ಉತ್ತರ ಇಸ್ರೇಲನ್ನು ಗುರಿಯಾಗಿಸಿ ಶುಕ್ರವಾರ 140 ರಾಕೆಟ್ಗಳ ದಾಳಿ ನಡೆಸಿ ಇಸ್ರೇಲ್ ಸೇನೆ ಯ ಬ್ರಿಗೇಡ್ವೊಂದರ ಪ್ರಧಾನ ಕಚೇರಿ ಮತ್ತು ರಕ್ಷಣ ನೆಲೆಗಳನ್ನು ಹಾನಿ ಮಾಡಿರುವುದಾಗಿ ಹೆಜ್ಬುಲ್ಲಾ ಹೇಳಿದೆ.