Advertisement
ಎಪ್ರಿಲ್ ತಿಂಗಳಿನಲ್ಲಿ ನಡೆಸಿದ ಡ್ರೋನ್ ದಾಳಿಗೆ ಇರಾನ್ “ಆಪರೇಶನ್ ಟ್ರೂ ಪ್ರಾಮಿಸ್’ ಎಂದು ಹೆಸರಿಟ್ಟಿತ್ತು. ಮಂಗಳವಾರದ ದಾಳಿಗೆ ಹೈಪರ್‌ಸಾನಿಕ್ ಕ್ಷಿಪಣಿ ಬಳಸಿದೆ. ಇವು ಶಬ್ದಕ್ಕಿಂತ 5 ಪಟ್ಟು ಅಥವಾ ಅದ ಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಅತೀ ದೂರದ ಗುರಿಯನ್ನು ನಿಖರ ವಾಗಿ ಛೇದಿಸುವ ಸಾಮರ್ಥ್ಯ ಹೊಂದಿವೆ. ವಿಶೇಷವೆಂದರೆ ಮಧ್ಯ ಪ್ರಾಚ್ಯ ಸಂಘರ್ಷದಲ್ಲಿ ಮೊದಲ ಬಾರಿಗೆ ಇಂಥ ಕ್ಷಿಪಣಿಗಳನ್ನು ಬಳಸಲಾಗಿದೆ.
-ಈ ಕ್ಷಿಪಣಿಗಳು ಶಬ್ದದ ವೇಗ ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸುತ್ತವೆ. ಅಂದರೆ ಮ್ಯಾಕ್1 ಮತ್ತು ಮ್ಯಾಕ್ 5ರ ವ್ಯಾಪ್ತಿಯಲ್ಲಿ ಗುರಿಯನ್ನು ತಲುಪತ್ತವೆ.
-ಈ ಕ್ಷಿಪಣಿಗಳಲ್ಲಿ ಜೆಟ್ ಎಂಜಿನ್‌ಗಳು ಅಥವಾ ರಾಕೆಟ್ ಬೂಸ್ಟರ್ ತಂತ್ರಜ್ಞಾನವನ್ನು ಬಳಸಲಾಗಿರುತ್ತದೆ.
-ನಿರ್ದಿಷ್ಟ ಗುರಿ ತಲುಪಲು ಈ ಕ್ಷಿಪಣಿಗಳಿಗೆ ಅತ್ಯಾಧುನಿಕ ಗೈಡೆನ್ಸ್ ಸಿಸ್ಟಮ್ ಬಳಸಲಾಗಿರುತ್ತದೆ.
-ಸೂಪರ್ ಸಾನಿಕ್ ಕ್ಷಿಪಣಿಗಳು ಬ್ಯಾಲಿಸ್ಟಿಕ್ ಪಥವನ್ನು ಅನುಸರಿಸಿತಮ್ಮ ಗುರಿಯನ್ನು ತಲುಪುತ್ತವೆ ಇವುಗಳನ್ನು ಸುಲಭವಾಗಿ ಹೊಡೆದುರುಳಿಸಬಹುದು.
-ಸೂಪರ್‌ಸಾನಿಕ್‌ಗೆ ಭಾರತದ ಬ್ರಹ್ಮೋಸ್, ರಷ್ಯಾದ ಪಿ-800 ಕ್ಷಿಪಣಿಗಳು ಅತ್ಯುತ್ತಮ ಉದಾಹರಣೆ
Related Articles
-ಹೈಪರ್ ಸಾನಿಕ್ ಕ್ಷಿಪಣಿಗಳು ಕನಿಷ್ಠ ಮ್ಯಾಕ್ 5ಕ್ಕಿಂತ ಹೆಚ್ಚು ಅಂದರೆ ಶಬ್ದದ ವೇಗಕ್ಕಿಂತ 5 ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತವೆ. ಈ ವೇಗವು ಮ್ಯಾಕ್ 10ರವರೆಗೂ ತಲುಪಬಹುದು.
-ಹೆಚ್ಚಾಗಿ ಸ್ಕ್ರ್ಯಾಮ್ ಜೆಟ್ಸ್ ಎಂಜಿನ್ ಅಥವಾ ರಾಕೆಟ್ ಬೂಸ್ಟರ್‌ಗಳನ್ನು ಇವುಗಳಲ್ಲಿ ಬಳಸಲಾಗಿರುತ್ತದೆ.
-ಹೈಪರ್ ಸಾನಿಕ್ ಕ್ಷಿಪಣಿಗಳು ಅತಿ ಹೆಚ್ಚು ವೇಗದಲ್ಲಿ ಚಲಿಸುವುದರಿಂದ ಇವು ಗಳನ್ನು ಪತ್ತೆ ಹಚ್ಚುವುದು ಭಾರೀ ಕಷ್ಟ
-ಈ ಕ್ಷಿಪಣಿಗಳು ಬ್ಯಾಲಿಸ್ಟಿಕ್ ಪಥವನ್ನು ಅನುಸರಿಸದೇ ತಮ್ಮ ಗುರಿಯನ್ನು
ಹೆಚ್ಚು ನಿಖರವಾಗಿ ತಲುಪುತ್ತವೆ.
-ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಸುಲಭವಾಗಿ ಹೊಡೆದುರುಳಿಸಲು ಸಾಧ್ಯವಾಗುವುದಿಲ್ಲ.
-ಚೀನದ ಡಿಎಫ್-ಜೆಫ್ ಹಾಗೂ ರಷ್ಯಾದ ಅವಂಗಾರ್ಡ್ ಹೈಪರ್ ಸಾನಿಕ್‌ಗೆ ಅತ್ಯುತ್ತಮ ಉದಾಹರಣೆ
Advertisement
ಮ್ಯಾಕ್ ವೇಗ ಎಂದರೆ- ವಿಮಾನದ ವೇಗ ಮತ್ತು ಶಬ್ದದ ವೇಗದ ಅನುಪಾತವನ್ನು ಸೂಚಿಸುವ ಅಳತೆ ಯಾಗಿದೆ. ಮ್ಯಾಕ್ 1 ಎಂದರೆ ಪ್ರತೀ ಗಂಟೆಗೆ ಕ್ಷಿಪಣಿಯು 1,195 ಕಿ.ಮೀ. ವೇಗದಲ್ಲಿ ಚಲಿಸಿದೆ ಎಂದರ್ಥ.