ಜೆರುಸಲೇಂ: ಗಾಜಾದಿಂದ ಹಠಾತ್ ಆಕ್ರಮಣದ ನಂತರ ಹಮಾಸ್ ಉಗ್ರಗಾಮಿ ಗುಂಪಿನ ವಿರುದ್ಧ ಆರಂಭವಾದ ಇಸ್ರೇಲ್ ಯುದ್ಧ ಮೂರು ದಿನಗಳನ್ನು ಕಂಡಿದೆ. ಸಂಘರ್ಷವು ಈಗಾಗಲೇ ಎರಡೂ ಕಡೆಗಳಲ್ಲಿ 1,100 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಇಸ್ರೇಲ್ ನಲ್ಲಿ 44 ಸೈನಿಕರು ಸೇರಿದಂತೆ 700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಹಮಾಸ್ ನ ಆಕ್ರಮಣದಿಂದ “ದೀರ್ಘ ಮತ್ತು ಸವಾಲಿನ ಯುದ್ಧ”ದ ಆರಂಭವಾಗಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಅಲ್ಲದೆ ಉಗ್ರಗಾಮಿ ಗುಂಪಿನ ಅಡಗು ತಾಣಗಳನ್ನು ನಾಶಪಡಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಈತನ್ಮಧ್ಯೆ, ಭಾನುವಾರದಂದು ಪಟ್ಟುಬಿಡದ ಇಸ್ರೇಲ್ ಗಾಜಾದಲ್ಲಿ ವೈಮಾನಿಕ ದಾಳಿಯನ್ನು ನಡೆಸಿದ್ದು, ಅಧಿಕಾರಿಗಳು ಕನಿಷ್ಠ 413 ಸಾವುಗಳನ್ನು ವರದಿ ಮಾಡಿದ್ದಾರೆ.
ಇದನ್ನೂ ಓದಿ:CWC2023: ಪ್ಲ್ಯಾನ್ ಮಾಡಿದ್ದು ಒಂದು, ಆಗಿದ್ದು ಮತ್ತೊಂದು; ರಾಹುಲ್ ಈ ಅಚ್ಚರಿಯ ಕಾರಣ ಬಹಿರಂಗ
ಹಮಾಸ್ ಇಸ್ರೇಲ್‌ನ ಮೇಲೆ ಸಾವಿರಾರು ರಾಕೆಟ್ ಗಳ ಮರು ದಾಳಿಯನ್ನು ನಡೆಸಿದೆ. ಹಲವಾರು ನಾಗರಿಕರನ್ನು ಹೊಡೆದುರುಳಿಸಿದೆ, ಕನಿಷ್ಠ 100 ಜನರನ್ನು ಒತ್ತೆಯಾಳುಗಳನ್ನಾಗಿಸಿಕೊಂಡಿದೆ.
ಹಮಾಸ್ ನ ದಾಳಿಗೆ ಒಳಗಾದ ಸಂಗೀತ ಉತ್ಸವದಿಂದ ಸುಮಾರು 260 ಶವಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಇಸ್ರೇಲಿ ರಕ್ಷಣಾ ಸೇವೆ ಝಕಾ ವರದಿ ಮಾಡಿದೆ.