ಧಾರವಾಡ: ಹವಾಮಾನ ಶಾಸ್ತ್ರ ಕುರಿತು ಇಸ್ರೇಲ್‌ನ ಜೇರುಸೇಲಂ ನಗರದ ಹೆಬ್ರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ತರಬೇತಿಗೆ ತೆರಳಿದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ವಿಜಯಪುರ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಸುಮೇಶ್ ಅವರು ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದು, ಅವರು ಎರಡು ದಿನದಲ್ಲಿ ಸುರಕ್ಷಿತವಾಗಿ ನಮ್ಮ ದೇಶಕ್ಕೆ ವಾಪಸ್ ಬರಲಿದ್ದಾರೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್.ಪಾಟೀಲ ಹೇಳಿದ್ದಾರೆ.
ಧಾರವಾಡದಲ್ಲಿ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಡಾ.ಸುಮೇಶ್ ಅವರು ನಮ್ಮ ವಿಜಯಪುರದ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಆ.7ರಿಂದ ಅಕ್ಟೋಬರ್ 22 ರವರೆಗೆ ಇಸ್ರೇಲ್ ನಲ್ಲಿ ನಡೆಯುತ್ತಿದ್ದ ಕೇಂದ್ರ ಸರ್ಕಾರದ ಜಾಗತಿಕ ತರಬೇತಿಗೆ ಅವರು ತೆರಳಿದ್ದರು.
ಇದನ್ನೂ ಓದಿ:BJP: ಸೋತಿದ್ದು ಮಾತ್ರವಲ್ಲ, ಗೆದ್ದು ಮಂತ್ರಿಯಾಗಿದ್ದೂ ಹೇಳಿ; ಸೋಮಣ್ಣಗೆ ಜೀವರಾಜ್ ಟೀಕೆ
ಇದೀಗ ಅಲ್ಲಿ ಯುದ್ಧ ಶುರುವಾಗಿದೆ. ನಾವು ನಿನ್ನೆಯಿಂದ ಅವರ ಸಂಪರ್ಕದಲ್ಲಿದ್ದೇವೆ. NAHEPRDP ಯೋಜನೆಯಡಿ ಅವರು ಇಸ್ರೇಲ್ ಗೆ ಹೋಗಿದ್ದರು. ಈ ಯೋಜನೆಯ ಅಧಿಕಾರಿಗಳು ಮತ್ತು ನಾವು ಸುಮೇಶ್ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರು ತಮ್ಮ ಬಳಿ ಒಂದು ವಾರಕ್ಕೆ ಆಗುವಷ್ಟು ಆಹಾರ ಇಟ್ಟುಕೊಂಡಿದ್ದಾರೆ. ಧಾರವಾಡ ಕೃಷಿ ಪಿವಿಯಿಂದ ಅವರೊಬ್ಬರೆ ಹೋಗಿದ್ದಾರೆ. ಅವರ ಕುಟುಂಬ ವಿಜಯಪುರದಲ್ಲಿದೆ. ದೆಹಲಿಯ ಐಸಿಆರ್ ಡೆಪ್ಯುಟಿ ಡೈರೆಕ್ಟರ್ ಜನರಲ್ ಅವರ ಗಮನಕ್ಕೂ ಈ ವಿಷಯ ತಂದಿದ್ದೇವೆ. ಅವರನ್ನು ಆದಷ್ಟು ಬೇಗ ಕರೆ ತರುವ ವ್ಯವಸ್ಥೆ ಮಾಡಲಾಗುತ್ತಿದೆ. ಸರ್ಕಾರ ಈಗ ಅವರನ್ನು ಏರ್ ಲಿಫ್ಟ್ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆ ಸಂಬಂಧಿತ ಆ್ಯಪ್ ಗೂ ಅವರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.