Advertisement

ಇಸ್ರೇಲ್‌ನಲ್ಲಿ ಮತ್ತೆ ನೆತನ್ಯಾಹು ಅಧಿಕಾರಕ್ಕೆ?

10:00 PM Nov 03, 2022 | Team Udayavani |

ಜೆರುಸಲೇಂ: ಇಸ್ರೇಲ್‌ ಸಂಸತ್‌ನ 120 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ನೇತೃತ್ವದ ಲಿಕುಡ್‌ ಪಕ್ಷಕ್ಕೆ ಸದ್ಯ 32 ಸ್ಥಾನಗಳು ಲಭಿಸಿವೆ.

Advertisement

ಫ‌ಲಿತಾಂಶದ ಮುನ್ಸೂಚನೆ ಪ್ರಕಾರ ನೆತನ್ಯಾಹು ಅವರ ಪಕ್ಷವೇ ಒಟ್ಟು 65 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಮತ್ತೆ ಸರ್ಕಾರ ರಚಿಸಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಅಧಿಕಾರದಲ್ಲಿ ಇರುವ ಪ್ರಧಾನಮಂತ್ರಿ ಯೈರ್‌ ಲಾಪಿಡ್‌ ಅವರ ಯೆಶ್‌ ಆತಿಡ್‌ ಪಕ್ಷಕ್ಕೆ 32, ರಿಲಿಜಿಯಸ್‌ ಜಿಯೋನಿಸಂ 14, ನ್ಯಾಷನಲ್‌ ಯುನಿಟಿ ಪಕ್ಷಕ್ಕೆ 12, ಶಾಸ್‌ ಎಂಬ ಪಕ್ಷಕ್ಕೆ 11, ಯುನೈಟೆಡ್‌ ತೋರಾ ಜುಡಾಯಿಸಂ ಪಕ್ಷಕ್ಕೆ ಎಂಟು ಸ್ಥಾನಗಳು ಸದ್ಯ ಲಭಿಸಿವೆ.

ಸದ್ಯ ಪ್ರತಿಪಕ್ಷಗಳ ಒಕ್ಕೂಟದ ಸರ್ಕಾರ ಅಧಿಕಾರದಲ್ಲಿ ಇದೆ. ಇಸ್ರೇಲ್‌ನಲ್ಲಿ ಇರುವ ಸಣ್ಣ ಪಕ್ಷಗಳು ಸಂಸತ್‌ ಪ್ರವೇಶಕ್ಕೆ ಅರ್ಹತೆ ಪಡೆಯಲು ಶೇ.3.25 ಮತಗಳನ್ನು ಪಡೆಯಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next