ಟೆಲ್ ಅವೀವ್(ಇಸ್ರೇಲ್):ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದಿದ್ದು, ಇಸ್ರೇಲ್ ಪಡೆ ಹಮಾಸ್ ಉಗ್ರರ ಅಡಗುತಾಣಗಳನ್ನು ಗುರಿಯಾಗಿರಿಸಿಕೊಂಡು ವೈಮಾನಿಕ ಹಾಗೂ ಯುದ್ಧ ಟ್ಯಾಂಕ್ ಮೂಲಕ ದಾಳಿ ನಡೆಸುತ್ತಿದೆ. ಮತ್ತೊಂದೆಡೆ ಗಾಜಾಪಟ್ಟಿಯನ್ನು ಇಬ್ಭಾಗ ಮಾಡುವುದಾಗಿ ಇಸ್ರೇಲ್ ಶಪಥ ಮಾಡಿರುವುದಾಗಿ ಸಿಎನ್ ಎನ್ ವರದಿ ತಿಳಿಸಿದೆ.
ಇದನ್ನೂ ಓದಿ:
ಇಸ್ರೇಲ್ ಸೈನಿಕರು ಗಾಜಾ ನಗರವನ್ನು ಸುತ್ತುವರಿದಿದ್ದು, ಇದರ ಪರಿಣಾಮ ಉತ್ತರ ಮತ್ತು ದಕ್ಷಿಣ ಭಾಗಗಳಾಗಿ ಇಬ್ಭಾಗವಾಗಲಿದೆ ಎಂದು ಇಸ್ರೇಲ್ ನ ಪ್ರಧಾನಿ ನೆತನ್ಯಾಹು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಗಾಜಾಪಟ್ಟಿಯಲ್ಲಿ ಹಮಾಸ್ ಉಗ್ರರ ಸುರಂಗ ಮಾರ್ಗ, ಅಡಗುತಾಣಗಳನ್ನು ಗುರಿಯಾಗಿರಿಸಿಕೊಂಡು ಇಸ್ರೇಲ್ ಪಡೆ ದಾಳಿ ನಡೆಸುತ್ತಿದೆ. ನಮಗೆ ಸ್ಪಷ್ಟವಾದ ಗುರಿ ಇದೆ. ಗಡಿಭಾಗದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ನಾವು ಯಾವುದೇ ಕ್ಷಣದಲ್ಲೂ ದೇಶದ ಉತ್ತರ ಭಾಗದಲ್ಲಿ ವೈಮಾನಿಕ ದಾಳಿಯನ್ನು ನಡೆಸಲು ಸಿದ್ಧತೆ ನಡೆಸಲಾಗಿದೆ.
ಕಳೆದ ಒಂದು ತಿಂಗಳಿನಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ 9,700ಕ್ಕೂ ಅಧಿಕ ಪ್ಯಾಲೆಸ್ತೇನಿಯನ್ನರು ಸಾವಿಗೀಡಾಗಿದ್ದಾರೆ. ಅಂದಾಜು 5ಸಾವಿರಕ್ಕೂ ಅಧಿಕ ಇಸ್ರೇಲ್ ಪ್ರಜೆಗಳು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.