Advertisement

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

10:50 PM May 07, 2024 | keerthan |

ನವದೆಹಲಿ: ಮಂಗಳವಾರ ಇಸ್ರೇಲ್‌ ಸೇನಾಪಡೆಗಳು ದಕ್ಷಿಣ ಗಾಜಾಪಟ್ಟಿಯಲ್ಲಿರುವ ರಫಾ ನಗರದ ಪೂರ್ವಭಾಗಕ್ಕೆ ನುಗ್ಗಿವೆ. ಹಮಾಸ್‌ ಉಗ್ರರ ಕೊನೆಯ ಬಲಿಷ್ಠ ನೆಲೆಯನ್ನು ತಮ್ಮ ಹಿಡಿತಕ್ಕೆ ಪಡೆದುಕೊಳ್ಳಲಾಗಿದೆ ಎಂದು ಇಸ್ರೇಲ್‌ ಸೇನೆ ಹೇಳಿದೆ.

Advertisement

ಸೋಮವಾರವಷ್ಟೇ ಈಜಿಪ್ಟ್-ಕತಾರ್‌ ಏರ್ಪಡಿಸಿದ್ದ ಸಂಧಾನಸೂತ್ರಕ್ಕೆ ಹಮಾಸ್‌ ಒಪ್ಪಿಗೆ ನೀಡಿತ್ತು. ಆದರೆ ತನ್ನ ಎಲ್ಲ ಬೇಡಿಕೆಗಳಿಗೆ ಅದರಲ್ಲಿ ಒಪ್ಪಿಗೆ ಸಿಕ್ಕಿಲ್ಲ ಎನ್ನುವ ಮೂಲಕ ಇಸ್ರೇಲ್‌ ದಾಳಿ ಮುಂದುವರಿಸಿದೆ. ಹೀಗಾಗಿ ಪರಿಸ್ಥಿತಿ ಪೂರ್ಣ ಬಿಗುವಿನಿಂದ ಕೂಡಿದ್ದು, 7 ತಿಂಗಳ ನಂತರವಾದರೂ ಯುದ್ಧ ನಿಲ್ಲುತ್ತದಾ, ಇಲ್ಲವಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಸಂಧಾನಕ್ಕೆ ಈಜಿಪ್ಟ್-ಕತಾರ್‌ ಮುಂದಾಗಿರುವ ಕಾರಣ, ಮಾತುಕತೆಗಾಗಿ ನಿಯೋಗ ಕಳುಹಿಸಲಾಗುತ್ತದೆ ಎಂದು ಇಸ್ರೇಲ್‌ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ. ಇದು ಸದ್ಯ ಇರುವ ಏಕೈಕ ಆಶಾಕಿರಣವಾಗಿದೆ. ಮತ್ತೂಂದು ಕಡೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ರಫಾ ಮೇಲೆ ದಾಳಿ ಮಾಡದಂತೆ, ಇಸ್ರೇಲ್‌ಗೆ ಒತ್ತಡ ಹೇರಿದ್ದಾರೆ.

ವಿಶ್ವಯುದ್ಧ ಸ್ಮಾರಕ ಹಾಳುಗೆಡವಿದ ಪ್ರತಿಭಟನಾಕಾರರು

ಅಮೆರಿಕದ ನ್ಯೂಯಾರ್ಕ್‌ನಲ್ಲಿ ಮೆಟ್‌ ಗಾಲಾ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಮಂಗಳವಾರ ಇಸ್ರೇಲ್‌ ವಿರೋಧಿ ಪ್ರತಿಭಟನಾಕಾರರು ಯತ್ನಿಸಿದ್ದಾರೆ. ಅವರನ್ನು ಪೊಲೀಸರು ತಡೆದಿದ್ದು, ಇದರಿಂದ ಕ್ರುದ್ಧರಾದ ಪ್ರತಿಭಟನಾಕಾರರು 1ನೇ ವಿಶ್ವಯುದ್ಧದ ಸ್ಮಾರಕವನ್ನು ಹಾಳುಗೆಡವಿ, ಅಮೆರಿಕದ ಧ್ವಜ ಸುಟ್ಟುಹಾಕಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next