Advertisement

Israel; ಬಂದೂಕುಗಳ ಖರೀದಿಗೆ 42,000 ಸ್ತ್ರೀಯರ ಅರ್ಜಿ!

12:59 AM Jun 23, 2024 | Team Udayavani |

ಜೆರುಸಲೇಂ: ಇಸ್ರೇಲ್‌ ಮೇಲೆ ಕಳೆದ ವರ್ಷ ಹಮಾಸ್‌ ಉಗ್ರರು ನಡೆಸಿದ ದಾಳಿ ಆ ರಾಷ್ಟ್ರದ ಚಿತ್ರಣವನ್ನೇ ಬದಲಿಸಿದ್ದು, ಅಲ್ಲಿನ ಮಹಿಳೆಯರು ತಮ್ಮ ಆತ್ಮರಕ್ಷಣೆಗಾಗಿ ಬಂದೂಕು ಖರೀದಿಗೆ ಮುಂದಾಗಿದ್ದಾರೆ! ದಾಳಿ ಬಳಿಕ ಬರೋಬ್ಬರಿ 42,000 ಮಹಿಳೆಯರು ಪರವಾನಿಗೆಗೆ ಅರ್ಜಿ ಸಲ್ಲಿಸಿದ್ದಾರೆ.

Advertisement

ಇಸ್ರೇಲ್‌ ರಕ್ಷಣ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ ವರ್ಷ ಅ.7 ರಂದು ಹಮಾಸ್‌ ದಾಳಿ ನಡೆದ ಬಳಿಕ ಬಂದೂಕು ಪರವಾನಿಗೆಗೆ ಅರ್ಜಿ ಸಲ್ಲಿಸಿ ರುವವರ ಪ್ರಮಾಣ ದಾಳಿಗೂ ಮುಂಚಿ ನ ಪ್ರಮಾಣಕ್ಕಿಂತ 3 ಪಟ್ಟು ಹೆಚ್ಚಾಗಿದೆ. ದಾಳಿ ಬಳಿಕ ಅರ್ಜಿ ಸಲ್ಲಿಸಿರುವ 42,000 ಮಹಿಳೆಯರ ಪೈಕಿ 18,000 ಅರ್ಜಿಗಳಿಗೆ ಈಗಾಗಲೇ ಅನುಮೋದನೆ ಸಿಕ್ಕಿದೆ. ಸಂಪೂರ್ಣ ಇಸ್ರೇಲ್‌ ಹಾಗೂ ಇಸ್ರೇಲ್‌ ಮಿಲಿಟರಿ ವಶದಲ್ಲಿರುವ ಪಶ್ಚಿಮ ದಂಡೆ ಯಲ್ಲಿರುವ 15,000 ಮಹಿಳೆಯರು ಬಂದೂಕುಗಳನ್ನು ಹೊಂದಿದ್ದು, 10000 ಮಹಿಳೆಯರು ಬಂದೂಕು ಪರವಾನಿಗೆಗೆ ಕಡ್ಡಾಯವಾಗಿರುವ ತರಬೇತಿ ಪಡೆಯ ಲು ನೋಂದಾಯಿಸಿ ಕೊಂಡಿದ್ದಾರೆ.

ನಾಗರಿಕರು ಶಸ್ತ್ರಾಸ್ತ್ರ° ಹೊಂದು ವುದನ್ನು ಇಸ್ರೇಲ್‌ ರಕ್ಷಣ ಸಚಿವ ಇತಮಾರ್‌ ಬೆನ್‌ ಜಿವಿರ್‌ ಪ್ರೋತ್ಸಾಹಿಸಿ ದ್ದರು. 2022ರಲ್ಲಿ ಪರವಾನಿಗೆ ಪಡೆದ ಇಸ್ರೇಲಿಗರ ಸಂಖ್ಯೆ 1ಲಕ್ಷ ದಾಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next