Advertisement

ಐ.ಎಸ್‌.ಪಿ.ಆರ್‌.ಎಲ್‌. ಯೋಜನೆಯ ಸಂತ್ರಸ್ತರಿಗೆ ಪರಿಹಾರ ನೀಡದಿದ್ದಲ್ಲಿ ಉಗ್ರ ಹೋರಾಟ

11:53 PM Oct 14, 2019 | Sriram |

ಕಾಪು: ಪಾದೂರಿನಲ್ಲಿ ಕಾರ್ಯಾಚರಿಸುತ್ತಿರುವ ಐ. ಎಸ್‌. ಪಿ.ಆರ್‌.ಎಲ್‌. ಘಟಕದ ಕಾಮಗಾರಿಯ ವೇಳೆ ಉಂಟಾದ ಬಂಡೆ ನ್ಪೋಟದಿಂದಾಗಿ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವ ಬಗ್ಗೆ ಕಾಮಗಾರಿ ನಡೆಸುತ್ತಿರುವ ಕಂಪೆನಿ ಮತ್ತು ಸರಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದ್ದರೂ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಯಾವುದೇ ಪ್ರಯತ್ನಗಳೂ ಇಷ್ಟರವರೆಗೆ ಆಗಿಲ್ಲ.

Advertisement

ಇಲ್ಲಿ ಕಾಮಗಾರಿಯಿಂದಾಗಿ ತೊಂದರೆಗೊಳಗಾಗಿರುವ ಸಂತ್ರಸ್ತರಿಗೆ ಕೂಡಲೇ ಪರಿಹಾರ ಧನವನ್ನು ಬಿಡುಗಡೆಗೊಳಿಸಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್‌ ಪಕ್ಷವು ಸ್ಥಳೀಯ ಜನ ಜಾಗೃತಿ ಸಮಿತಿಯೊಂದಿಗೆ ಸೇರಿಕೊಂಡು ಬೃಹತ್‌ ಮಟ್ಟದ ಪ್ರತಿಭಟನೆಯನ್ನು ಕೈಗೊಳ್ಳಲಿದೆ ಎಂದು ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ಹೇಳಿದರು.
ಕಾಪು ರಾಜೀವ್‌ ಭವನದಲ್ಲಿ ಅ. 14ರಂದು ನಡೆದ ಕಾಂಗ್ರೆಸ್‌ ಪಕ್ಷದ ಸಭೆಯಲ್ಲಿ ಅವರು ಮಾತನಾಡಿದರು.

ಪಕ್ಷ ಸಂಘಟನೆಯ ಉದ್ದೇಶದೊಂದಿಗೆ ಎಲ್ಲಾ ಗ್ರಾಮೀಣ ಕಾಂಗ್ರೆಸ್‌ ಸಮಿತಿಗಳು ಪ್ರತೀ ತಿಂಗಳು ಸಭೆಯನ್ನು ನಡೆಸಿ, ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸಭೆಯ ವರದಿಯನ್ನು ಬ್ಲಾಕ್‌ ಸಮಿತಿಗೆ ಒಪ್ಪಿಸುವುದು ಅತೀ ಅಗತ್ಯವಾಗಿದೆ ಎಂದರು.

ನೂತನವಾಗಿ ನೇಮಕಗೊಂಡ ಶಿರ್ವ, ಪಡುಬಿದ್ರಿ, ಮಜೂರು ಮತ್ತು ಮಲ್ಲಾರು ಗ್ರಾಮೀಣ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರನ್ನು ಈ ಸಂದರ್ಭ ಸಮ್ಮಾನಿಸಿ, ಅಭಿನಂದಿಸಲಾಯಿತು.ಕೆಪಿಸಿಸಿ ಕಾರ್ಯದರ್ಶಿ ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು, ಕಾಪು ನಗರ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಸಾದಿಕ್‌, ಪಕ್ಷದ ಮುಖಂಡರಾದ ದೇವಪುತ್ರ ಕೋಟ್ಯಾನ್‌, ಗೋಪಾಲ ಪೂಜಾರಿ, ಮನಹರ್‌ ಇಬ್ರಾಹಿಂ, ಎಚ್‌. ಅಬ್ದುಲ್ಲಾ, ರಾಜೇಶ್‌ ರಾವ್‌ ಪಾಂಗಾಳ, ವೈ.ಸುಧೀರ್‌, ಸರಸು ಡಿ. ಬಂಗೇರ, ಶಾಂತಲತಾ ಶೆಟ್ಟಿ, ಜಿತೇಂದ್ರ ಫುರ್ಟಾದೋ, ದಿವಾಕರ್‌ ಬಿ. ಶೆಟ್ಟಿ, ಶೇಖರ್‌ ಸಾಲ್ಯಾನ್‌, ನಾಗೇಶ್‌ ಸುವರ್ಣ, ದಿವಾಕರ್‌ ಡಿ. ಶೆಟ್ಟಿ, ಫಾರೂಕ್‌ ಚಂದ್ರನಗರ, ಸತೀಶ್‌ದೇಜಾಡಿ ಉಪಸ್ಥಿತರಿದ್ದರು. ಕಾಪು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ನವೀನ್‌ ಚಂದ್ರ ಸುವರ್ಣ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಮೀರ್‌ ಮೊಹಮ್ಮದ್‌ ಕಾರ್ಯಕ್ರಮ ನಿರೂಪಿಸಿದರು. ಬ್ಲಾಕ್‌ ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾ ಶೆಟ್ಟಿ ವಂದಿಸಿದರು.

ಸಮಸ್ಯೆಗೆ ಸ್ಪಂದಿಸುತ್ತಿಲ್ಲ
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನರ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲ. ಪ್ರತಿಪಕ್ಷಗಳು ಜನರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದರೂ ಕಿವುಡುತನ ಪ್ರದರ್ಶಿಸುತ್ತಿದೆ. ಯಾವುದೇ ಜನಪರ ಕೆಲಸ ಕಾರ್ಯಗಳು ನಡೆಸದೇ ಸರಕಾರ ನಿಷ್ಕ್ರಿಯವಾಗಿದೆ. ಇದನ್ನು ವಿರೋಧಿಸಿ ಕಾಪು ಕ್ಷೇತ್ರದ ಪ್ರತೀ ಜಿಲ್ಲಾ ಪಂಚಾಯತ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದು ವಿನಯ್‌ ಕುಮಾರ್‌ ಸೊರಕೆ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next