Advertisement

ಐಸಿಸ್‌ ಸೇರಿದ್ದ ಕೇರಳಿಗರು ಸ್ವದೇಶಕ್ಕೆ?

01:57 AM Jun 06, 2019 | sudhir |

ಕಾಸರಗೋಡು: ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತೆರಳಿ ಇಸ್ಲಾಮಿಕ್‌ ಸ್ಟೇಟ್(ಐಸಿಸ್‌) ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದ ಕಾಸರಗೋಡಿನ ಕೆಲವರು ಸ್ವದೇಶಕ್ಕೆ ವಾಪಸಾಗುವ ಇಚ್ಛೆ ವ್ಯಕ್ತಪಡಿಸಿದ್ದು, ಅವರ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

Advertisement

ತ್ರಿಕ್ಕರಿಪುರದ ಇಳಂಬಚ್ಚಿಯ ಫಿರೋಜ್‌, ಮತ್ತಿಬ್ಬರು ಒಂದೂವರೆ ತಿಂಗಳ ಹಿಂದೆ ಕಾಸರಗೋಡಿನಲ್ಲಿನ ತಮ್ಮ ಸಂಬಂಧಿಕರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದು, ತಮಗೆ ಕೇರಳಕ್ಕೆ ವಾಪಸಾಗುವ ಇಚ್ಛೆಯಿದೆ ಎಂದಿದ್ದಾರೆ ಎನ್ನಲಾಗಿದೆ. ಈ ಮೂವರು ಕೂಡ ಸದ್ಯ ಸಿರಿಯಾದಲ್ಲಿದ್ದಾರೆ.

ಕಾಸರಗೋಡಿನ ಪೀಸ್‌ ಪಬ್ಲಿಕ್‌ ಸ್ಕೂಲ್ ಉದ್ಯೋಗಿ ಆಗಿದ್ದ ಫಿರೋಜ್‌, 2016ರಲ್ಲಿ ಐಸಿಸ್‌ ಸೇರಲೆಂದು ಕೇರಳವನ್ನು ತೊರೆದಿದ್ದ. ತನ್ನ ಸಹೋದ್ಯೋಗಿ ಅಬ್ದುಲ್ ರಶೀದ್‌ ನೇತೃತ್ವದಲ್ಲಿ ಕಾಸರಗೋಡಿನ 19 ಸಹಿತ 21 ಜನರ ತಂಡದೊಂದಿಗೆ ಸಿರಿಯಾದತ್ತ ಪ್ರಯಾಣ ಬೆಳೆಸಿದ್ದ. ಕೇರಳದಲ್ಲಿ ಐಸಿಸ್‌ಗೆ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ ಅಬ್ದುಲ್ ರಶೀದ್‌ ಈಚೆಗೆ ಅಫ್ಘಾನಿಸ್ಥಾನದಲ್ಲಿ ಅಮೆರಿಕದ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದ. ಒಟ್ಟು 13 ಜನ ಸತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಐಸಿಸ್‌ ಉಗ್ರರನ್ನು ಗುರಿಯಾಗಿಸಿಕೊಂಡು ಸತತ ದಾಳಿ ನಡೆಯುತ್ತಿರುವ ಕಾರಣ, ಫಿರೋಜ್‌ ಸಹಿತ ಅನೇಕ ಯುವಕರು ಮತ್ತೆ ಸ್ವದೇಶಕ್ಕೆ ಮರಳಲು ಮನಸ್ಸು ಮಾಡಿದ್ದಾರೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next