Advertisement

ದೈವನಿಂದನೆ: ಪಾಕ್‌ ಶಿಕ್ಷಕಿಗೆ ಗಲ್ಲು

07:14 PM Sep 28, 2021 | Team Udayavani |

ಇಸ್ಲಾಮಾಬಾದ್‌: ದೈವನಿಂದನೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದ ಮುಖ್ಯೋಪಾಧ್ಯಾಯಿನಿಗೆ ಪಾಕಿಸ್ತಾನದ ಲಾಹೋರ್‌ನ ಸ್ಥಳೀಯ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿದೆ.

Advertisement

ಜತೆಗೆ 2,418 ರೂ. ದಂಡವನ್ನೂ ವಿಧಿಸಿದೆ. ಖಾಸಗಿ ಶಾಲೆಯ ಮುಖ್ಯೋಪಾಧ್ಯಾಯಿನಿ  ಸಲ್ಮಾ ತನ್ವೀರ್‌, 2013ರಲ್ಲಿ ದೈವನಿಂದನೆ ಮಾಡಿದ್ದರು ಎಂದು ಆರೋಪ ಮಾಡಲಾಗಿತ್ತು.

ಈ ವಿಚಾರವಾಗಿ ಲಾಹೋರ್‌ ಠಾಣೆಯಲ್ಲಿ  ದೈವ ನಿಂದನೆ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ವೇಳೆ ಆಕೆಯ ವಕೀಲರು “ಕಕ್ಷಿದಾರೆ ಮಾನಸಿಕ ಅಸ್ವಸ್ಥೆ’ ಎಂದು ಸೂಚಿಸಿದ್ದ ವೈದ್ಯಕೀಯ ವರದಿ ಸಲ್ಲಿಕೆ ಮಾಡಿದ್ದರು. ತನಿಖೆಯ ವೇಳೆ ಅದು ಸುಳ್ಳೆಂದು ಸಾಬೀತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next