Advertisement

Islamabad: 2 ಸಾವಿರ ವರ್ಷಗಳ ಹಿಂದಿನ ತಾಮ್ರದ ನಾಣ್ಯಗಳು ಪತ್ತೆ

09:29 PM Dec 02, 2023 | Team Udayavani |

ಇಸ್ಲಾಮಾಬಾದ್‌: ಪ್ರಾಚೀನ ಕಾಲದ ನಾಗರಿಕತೆಯ ಸ್ಥಳ ಮೊಹೆಂಜದಾರೋದಲ್ಲಿ 2 ಸಾವಿರ ವರ್ಷಗಳಷ್ಟು ಹಳೆಯದಾಗಿರುವ ತಾಮ್ರದ ನಾಣ್ಯಗಳು ಸಿಕ್ಕಿವೆ. ಅವುಗಳನ್ನು ಕುಶಾನ ಸಾಮ್ರಾಜ್ಯದ ಅವಧಿಯಲ್ಲಿ ಟಂಕಿಸಲಾಗಿರುವ ಸಾಧ್ಯತೆ ಇದೆ ಎಂದು ಸಂಶೋಧಕರ ಅಭಿಪ್ರಾಯ. ಈ ಅವಧಿಯಲ್ಲಿ ಬೌದ್ಧ ಧರ್ಮವೂ ಹೆಚ್ಚಿನ ಜನಪ್ರಿಯತೆ ಪಡೆದಿತ್ತು ಎಂದೂ ಸಂಶೋಧಕರು ನಡೆಸಿದ ಅಧ್ಯಯನಗಳಿಂದ ತಿಳಿದುಬಂದಿದೆ.

Advertisement

ಇತಿಹಾಸ ಸಂಶೋಧಕ ಶೇಖ್‌ ಜಾವೇದ್‌ ಅಲಿ ಸಿಂಧಿ ಸಂದರ್ಶನವೊಂದರಲ್ಲಿ ಮಾತನಾಡಿ ಉತVನನದ ವೇಳೆ ಪತ್ತೆಯಾಗಿರುವ ನಾಣ್ಯಗಳ ಸಂಖ್ಯೆಯೇ 1,500 ಇರಬಹುದು ಎಂದರು. ಈ ಸ್ಥಳ ಕ್ರಿಸ್ತಪೂರ್ವ 2,600ನೇ ವರ್ಷಕ್ಕೆ ಸಂಬಂಧಿಸಿದ್ದಾಗಿರುವ ಸಾಧ್ಯತೆಗಳಿವೆ ಎಂದರು. ಇದರ ಜತೆಗೆ ಅಲ್ಲಿ ಸ್ತೂಪವೊಂದು ಪತ್ತೆಯಾಗಿದ್ದು, ಅದು ಮೊಹೆಂಜದಾರೋ ನಾಗರಿಕತೆ ಪತನಗೊಂಡು 1,600 ವರ್ಷಗಳ ಬಳಿಕ ನಿರ್ಮಿಸಿದ್ದಾಗಿರಬಹುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next