Advertisement

ಮಸೀದಿ ಪ್ರವೇಶಕ್ಕೆ ಮಹಿಳೆಯರಿಗೆ ನಿಷೇಧ ಹೇರಿಲ್ಲ: ಸುಪ್ರೀಂಗೆ ಅರಿಕೆ

09:52 AM Jan 31, 2020 | Hari Prasad |

ಹೊಸದಿಲ್ಲಿ: ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಮಸೀದಿ ಪ್ರವೇಶ ಮತ್ತು ಪ್ರಾರ್ಥನೆ ಸಲ್ಲಿಸುವ ಬಗ್ಗೆ ಯಾವುದೇ ರೀತಿಯಲ್ಲಿ ನಿಷೇಧ ಹೇರಿಲ್ಲ. ಅವರು ಮಸೀದಿ ಪ್ರವೇಶ ಮಾಡಿ ಪ್ರಾರ್ಥನೆ ಸಲ್ಲಿಸಲು ಮುಕ್ತ ಅವಕಾಶ ಇದೆ ಎಂದು ಬುಧವಾರ ಸುಪ್ರೀಂಕೋರ್ಟ್‌ಗೆ ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಪ್ರಮಾಣ ಪತ್ರ ಸಲ್ಲಿಕೆ ಮಾಡಿದೆ.

Advertisement

ಆದರೆ ಮಹಿಳೆಯರು ಅಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುವ ವಿಚಾರವನ್ನು ಕೇವಲ ಆಯ್ಕೆಯ ವಿಚಾರವನ್ನಾಗಿಸಲಾಗಿದೆ. ಆದರೆ ಮುಸ್ಲಿಂ ಸಮುದಾಯದ ಪುರುಷರಿಗೆ ಕಡ್ಡಾಯಗೊಳಿಸಲಾಗಿದೆ ಎಂದು ಮಂಡಳಿ ಹೇಳಿದೆ ಎಂದು ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ. ಮಸೀದಿ ಪ್ರವೇಶದ ವಿಚಾರ ನಿಟ್ಟಿನಲ್ಲಿ ಮಹಿಳೆಯರಿಗೆ ಯಾವುದೇ ರೀತಿಯಲ್ಲಿ ಫ‌ತ್ವ ಹೊರಡಿಸಲಾಗಿಲ್ಲ ಎಂದು ಅಫಿದಾವಿತ್‌ನಲ್ಲಿ ಹೇಳಿಕೊಡಿದೆ.

ಮಹಾರಾಷ್ಟ್ರ ಮೂಲದ ಮುಸ್ಲಿಂ ಸಮುದಾಯದ ದಂಪತಿ, ‘ಜಮಾತ್‌-ಎ-ಇಸ್ಲಾಮಿ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ಇದೆ. ಮುಜಾಹಿದ್‌ ಗುಂಪಿನಲ್ಲಿ ಅವಕಾಶ ಇಲ್ಲ. ಒಂದು ವೇಳೆ ಅವಕಾಶ ನೀಡಿದರೂ ಮಹಿಳೆಯರ ಪ್ರಾರ್ಥನೆಗೆ ಪ್ರತ್ಯೇಕ ಸ್ಥಳ ಮತ್ತು ಅಲ್ಲಿಗೆ ಪ್ರವೇಶ ಪ್ರವೇಶಕ್ಕೆ ಪ್ರತ್ಯೇಕ ದ್ವಾರ ಇರುತ್ತದೆ. ಇದೊಂದು ತಾರತಮ್ಯದಿಂದ ಕೂಡಿದೆ. ಇದು ಮೂಲ ಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅವರು ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next