Advertisement

ಐಎಸ್‌ಎಲ್‌: ಕೋಲ್ಕತಾ ವಿರುದ್ಧ ಬೆಂಗಳೂರಿಗೆ ಜಯ

06:35 AM Feb 05, 2018 | Team Udayavani |

ಕೋಲ್ಕತಾ: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಕೂಟದಲ್ಲಿ ಬೆಂಗಳೂರು ಎಫ್ಸಿ ತಂಡ  2-0 ಗೋಲುಗಳ ಅಂತರದಿಂದ ಅಟ್ಲೆಟಿಕೊ ಡಿ ಕೋಲ್ಕತಾ ತಂಡವನ್ನು ಮಣಿಸಿದೆ.

Advertisement

ಕೋಲ್ಕತಾದ ಸಾಲ್ಟ್ ಲೇಕ್‌ನಲ್ಲಿ ಶನಿವಾರ ಪಂದ್ಯ ನಡೆದಿತ್ತು. ಬೆಂಗಳೂರು ತಂಡದ ಪರ 3ನೇ ನಿಮಿಷದಲ್ಲಿ ಜೋರ್ಡಿ ಫಿಗುರೆಸ್‌ ಹಾಗೂ ಮಿಕು 83ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಬೆಂಗಳೂರಿಗೆ 2-0 ಅಂತರದ ಗೋಲು ತಂದುಕೊಟ್ಟರು. ಈ ಮೂಲಕ ಕೂಟದಲ್ಲಿ ಬೆಂಗಳೂರು ಸತತ ಮೂರನೇ ಗೆಲುವು ಸಾಧಿಸಿತು. ಕೋಲ್ಕತಾ ತಂಡ ಗೆಲುವಿಗಾಗಿ ಸಾಕಷ್ಟು ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಲಿಲ್ಲ. ಆತಿಥೇಯ ತಂಡದ ಎಲ್ಲ ಪ್ರಯತ್ನವನ್ನು ಸುನಿಲ್‌ ಚೆಟ್ರಿ ಪಡೆ ಭಗ್ನಗೊಳಿಸಿತು.
 

Advertisement

Udayavani is now on Telegram. Click here to join our channel and stay updated with the latest news.

Next