Advertisement

ಇಸ್ಕಾನ್‌ ಶ್ರೀಕೃಷ್ಣ ಬಲರಾಮ ರಥಯಾತ್ರೆ

06:04 AM Jan 07, 2019 | |

ಮೈಸೂರು: ನಗರದ ಜಯನಗರದಲ್ಲಿರುವ ಇಸ್ಕಾನ್‌ ಸಂಸ್ಥೆಯ 21ನೇ ವಾರ್ಷಿಕ ರಥಯಾತ್ರೆಯು ಅದ್ಧೂರಿಯಾಗಿ ಜರುಗಿತು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಶಾಸಕ ಎಲ್‌.ನಾಗೇಂದ್ರ, ಮಾಜಿ ಶಾಸಕ ಗೋ.ಮಧು ಸೂದನ್‌, ಇಸ್ಕಾನ್‌ ಸಂಸ್ಥೆ ಅಧ್ಯಕ್ಷ ಮಧುಪಂಡಿತ ದಾಸ್‌ ರಥಯಾತ್ರೆಗೆ ಚಾಲನೆ ನೀಡಿದರು. 

Advertisement

ಚೆನ್ನೆನ ಇಸ್ಕಾನ್‌ ಅಧ್ಯಕ್ಷ ಸ್ತೋಕ ಕೃಷ್ಣಸ್ವಾಮಿ ಮಾತನಾಡಿ, 500 ವರ್ಷಗಳ ಹಿಂದೆ ಚೈತನ್ಯ ಮಹಾಪ್ರಭುಗಳು ಕೃಷ್ಣನ ನಾಮಸಂದೇಶ, ಕೀರ್ತನೆಯ ಉದ್ದೇಶವನ್ನು ಸಾರುವುದಕ್ಕೆ ಈ ರಥಯಾತ್ರೆಯು ಪ್ರಾರಂಭಗೊಂಡಿತು ಎಂದು ರಥಯಾತ್ರೆಯ ಉದ್ದೇಶವನ್ನು ವಿವರಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಗೋ.ಮಧುಸೂದನ್‌ ಮಾತನಾಡಿ, ಕೃಷ್ಣನ ಲೆಕ್ಕ ಎಂಬ ಮಾತನ್ನು ಸುಲಭವಾಗಿ ಉಪಯೋಗಿಸುವ ನಾವು ಕೃಷ್ಣನ ಜೀವನವನ್ನು ನೋಡಬೇಕು. ಪ್ರಜೆಗಳನ್ನು ಭರಿಸುವುದೇ ನಿಜವಾದ ಧರ್ಮ. ಮನಸ್ಸು, ಬಾಯಿ, ಕೆಲಸ ಮೂರರಲ್ಲೂ ಏಕತೆಯನ್ನು ನೋಡುವುದೇ ನಿಜವಾದ ಹಾದಿ ಎಂದು ಹೇಳಿದರು.

ನಿಜವಾದ ಜೀವನ ಧರ್ಮ ಅನುಸರಿಸಬೇಕಾದರೆ ಕೃಷ್ಣನ ಜೀವನವನ್ನು ನೋಡಿ ಅನುಸರಿಸಬೇಕು. 2019ರ ಭಾರತದ ಧರ್ಮ ಯುದ್ಧಕ್ಕಾಗಿಯೇ ಕೃಷ್ಣ ರಥದಲ್ಲಿ ಕುಳಿತಿದ್ದಾನೆ ಎಂದು ತಮ್ಮ ಭಾವನೆ ಹೊರ ಹಾಕಿದರು.

ಮಧುಪಂಡಿತ ದಾಸ್‌ ಮಾತನಾಡಿ, ಕಲಿಯುಗದಲ್ಲಿ ಕೃಷ್ಣನು ಹರೇಕೃಷ್ಣ ಮಹಾಮಂತ್ರದ ಮೂಲಕ ಅವತರಿಸಿದ್ದಾನೆ. ಈ ಮಂತ್ರವು ಚೈತನ್ಯ ಮಹಾಪ್ರಭುಗಳು ಕೊಟ್ಟ ಸುಲಭದ ಆಯುಧ ಕೃಷ್ಣ ಈ ಮಹಾಮಂತ್ರದ ಮೂಲಕ ನಮ್ಮ ಬಳಿ ಸಾರುತ್ತಾನೆ. ಈ ಸುಲಭದ ಹಾದಿಯನ್ನು ಪ್ರಪಂಚಕ್ಕೆ ಪರಿಚಯಿಸಿದ ಶ್ರೀಪ್ರಭುಪಾದರನ್ನು ಹೊಗಳಿದರು. 

Advertisement

ರಥಯಾತ್ರೆ ಉತ್ಸವವು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟು ದೊಡ್ಡ ಗಡಿಯಾರ, ಗಾಂಧಿವೃತ್ತ, ಸಯ್ನಾಜಿರಾವ್‌ ರಸ್ತೆ, ಚಿಕ್ಕಗಡಿಯಾರ, ದೇವರಾಜ ಅರಸು ರಸ್ತೆ, ನಾರಾಯಣಶಾಸಿ ರಸ್ತೆ, ಚಾಮರಾಜ ಜೊಡಿರಸ್ತೆ, ರಾಮಸ್ವಾಮಿ ವೃತ್ತ, ಜೆಎಲ್‌ಬಿ ರಸ್ತೆ, ಆರ್‌ಟಿಓ ವೃತ್ತ, ನ್ಯೂ ಕಾಂತರಾಜ ಅರಸು ರಸ್ತೆ, ಜಯನಗರ ಎರಡನೇ ಮುಖ್ಯರಸ್ತೆಯ ಮೂಲಕ 18ನೇ ಕ್ರಾಸ್‌ನಲ್ಲಿರುವ ಇಸ್ಕಾನ್‌ ದೇವಾಲಯವನ್ನು ತಲುಪಿತು.

ರಥಯಾತ್ರೆಯಲ್ಲಿ ಅನೇಕ ಸಾಂಸ್ಕೃತಿಕ ಆಕರ್ಷಣೆಗಳು, ಮಂಗಳವಾದ್ಯ ಸಹಿತ ಇಸ್ಕಾನ್‌ ಭಕ್ತರಿಂದ ಸಂಕೀರ್ತನೆ ನಡೆಯಿತು. ಶ್ರೀಕೃಷ್ಣಬಲರಾಮರ ವಿಗ್ರಹವನ್ನು ಕೂರಿಸಿರುವ ಅದ್ಭುತವಾದ 35 ಅಡಿ ಎತ್ತರದ ರಥ ಹಾಗೂ ಮೂವತ್ತು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next