ಕಾಬೂಲ್:ಅಫ್ಘಾನಿಸ್ತಾನದ ಅತಿದೊಡ್ಡ ಸೇನಾ ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದ್ದ ಗುಂಡಿನ ದಾಳಿ ಮತ್ತು ಅವಳಿ ಸ್ಫೋಟದ ಹೊಣೆಯನ್ನು ಐಸಿಸ್ ಕೆ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿದೆ. ಈ ಘಟನೆಯಲ್ಲಿ 25 ಮಂದಿ ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದರು.
ಇದನ್ನೂ ಓದಿ:ತುಮಕೂರು : ಡೆತ್ ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ ಅಪ್ಪು ಅಭಿಮಾನಿ
ಸೇನಾ ಆಸ್ಪತ್ರೆಯೊಳಗೆ ಶಸ್ತ್ರಸಜ್ಜಿತ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಮತ್ತೊಂದೆಡೆ ಆತ್ಮಾಹುತಿ ಬಾಂಬ್ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಳ್ಳುವ ಮೂಲಕ ದಾಳಿ ನಡೆಸಿರುವುದಾಗಿ ವರದಿ ವಿವರಿಸಿದೆ.
ಅಫ್ಘಾನಿಸ್ತಾನದ ಕಾಬೂಲ್ ನಲ್ಲಿರುವ 400 ಬೆಡ್ ಗಳ ಪ್ರತಿಷ್ಠಿತ ಸರ್ದಾರ್ ಮೊಹಮ್ಮದ್ ದೌದ್ ಖಾನ್ ಮಿಲಿಟರಿ ಆಸ್ಪತ್ರೆ ಮೇಲೆ ಐಸಿಸ್ ಕೆ ಉಗ್ರರು ದಾಳಿ ನಡೆಸಿರುವುದಾಗಿ ಹೊಣೆ ಹೊತ್ತುಕೊಂಡಿದೆ ಎಂದು ತಾಲಿಬಾನ್ ವಕ್ತಾರ ಝಬಿವುಲ್ಲಾ ಮುಜಾಹಿದ್ ತಿಳಿಸಿರುವುದಾಗಿ ವರದಿ ಹೇಳಿದೆ.
ಆಸ್ಪತ್ರೆಯ ಹೊರ ಆವರಣದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಭಾರೀ ಪ್ರಮಾಣದ ಸ್ಫೋಟಕ ತುಂಬಿದ್ದು, ಅದೂ ಕೂಡಾ ಸ್ಫೋಟಗೊಂಡಿತ್ತು. ಇದರ ಪರಿಣಾಮ ತಾಲಿಬಾನ್ ಬಂಡುಕೋರರು ಸಾವಿಗೀಡಾಗಿದ್ದರು. ಈ ದಾಳಿಯ ಹೊಣೆಯನ್ನು ಐಸಿಸ್ ಕೆ (ಖೋರ್ಸಾನ್) ಹೊತ್ತುಕೊಂಡಿದೆ.