Advertisement

ಪಾಕ್‌ನಲ್ಲಿ ಹೆಚ್ಚಿರುವ ಐಸಿಸ್‌ ಉಗ್ರರು : ಪಾಕ್‌ ಚಿಂತನ ಚಾವಡಿ

04:54 PM Jan 08, 2018 | Team Udayavani |

ಇಸ್ಲಾಮಾಬಾದ್‌ : ಪಾಕ್‌ ಸರಕಾರ ತನ್ನ ನೆಲದಲ್ಲಿ ಐಸಿಸ್‌ ಉಗ್ರರು ನೆಲೆಯೂರಿದ್ದಾರೆ ಎಂಬುದನ್ನು ಅಲ್ಲಗಳೆಯುತ್ತಾ ಬಂದಿದೆ; ಆದರೆ ವಾಸ್ತವದಲ್ಲಿ ಐಸಿಸ್‌ ಉಗ್ರರ ಸಂಖ್ಯೆ ದೇಶದಲ್ಲಿ ಗಮನಾರ್ಹವಾಗಿ ಹೆಚ್ಚಿದೆ ಮತ್ತು ಇದು ದೇಶದ ಭದ್ರತೆಗೆ ದೊಡ್ಡ ಅಪಾಯವಾಗಿ ಪರಿಣಮಿಸಲಿದೆ ಎಂದು ಪಾಕಿಸ್ಥಾನದ ಚಿಂತನ ಚಾವಡಿಯೊಂದು ಹೇಳಿದೆ.

Advertisement

ಪಾಕಿಸ್ಥಾನ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಪೀಸ್‌ ಸ್ಟಡೀಸ್‌ (ಪಿಐಪಿಎಸ್‌) ವರದಿ ಪ್ರಕಾರ ಐಸಿಸ್‌ ಉಗ್ರರ ಉಪಸ್ಥಿತಿ ಉತ್ತರ ಸಿಂಧ್‌ ಮತ್ತು ಬಲೂಚಿಸ್ಥಾನದಲ್ಲಿ ಹೆಚ್ಚಿದೆ. ಕಳೆದ ವರ್ಷ ಇಬ್ಬರು ಚೀನೀ ಪ್ರಜೆಗಳ ಅಪಹರಣ ಮತ್ತು ಕೊಲೆಯ ಹಿಂದೆ ಐಸಿಸ್‌ ಉಗ್ರರೇ ಇದ್ದರು ಎಂಬುದನ್ನು “ಪಿಪ್ಸ್‌’ ವರದಿ ಉಲ್ಲೇಖೀಸಿ ಡಾನ್‌ ನ್ಯೂಸ್‌ ವರದಿ ಮಾಡಿದೆ. 

ಪಾಕಿಸ್ಥಾನದ ಮುಂದಿರುವ ಭದ್ರತಾ ಸವಾಲುಗಳು ಎಂಬ ಬಗ್ಗೆ ಒಳನೋಟ ಬೀರುವ ಪಿಪ್ಸ್‌ ವಿಶ್ಲೇಷಣೆಯು 2017ರ ವಿಶೇಷ ವರದಿ ಎಂಬ ಶೀರ್ಷಿಕೆಯೊಂದಿಗೆ ಬಹಿರಂಗವಾಗಿದೆ. 

 ಪಾಕಿಸ್ಥಾನದಲ್ಲಿ  ಐಸಿಸ್‌ ಉಗ್ರರ ಸಂಘಟಿತ ಉಪಸ್ಥಿತಿ ಎಂಬುದನ್ನು ಪಾಕ್‌ ಸರಕಾರ ಅಲ್ಲಗಳೆಯುತ್ತಲೇ ಬಂದಿದೆ. ಹಾಗಿದ್ದರೂ ಈಚಿನ ವರ್ಷಗಳಿಲ್ಲ ಬಲೂಚಿಸ್ಥಾನದಲ್ಲಿ ಮತ್ತು ಇತರೆಡೆಗಳಲ್ಲಿ ನಡೆದಿರುವ ಭೀಕರ ಉಗ್ರ ದಾಳಿಗಳನ್ನು ಹೊಣೆಯನ್ನು ಐಸಿಸ್‌ ಉಗ್ರ ಸಂಘಟನೆ ವಹಿಸಿಕೊಂಡು ಬಂದಿರುವುದು ಪಾಕ್‌ ನೆಲದಲ್ಲಿನ ಅದರ ಉಪಸ್ಥಿತಿಗೆ ಸಾಕ್ಷಿಯಾಗಿದೆ ಎಂದು ಪಿಪ್ಸ್‌ ವರದಿ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next