ನ್ಯೂಯಾರ್ಕ್: ಸಿರಿಯಾ ಮತ್ತು ಇರಾಕ್‌ನಲ್ಲಿ ಅಮೆರಿಕ ಸೇನೆಯ ದಾಳಿಯಿಂದ ಕಾಲ್ಕಿತ್ತ ಇಸ್ಲಾಮಿಕ್ ಸ್ಟೇಟ್ ಉಗ್ರರು ಈಗ ಅಫ್ಘಾನಿಸ್ಥಾನವನ್ನೇ ತಮ್ಮ ನೆಲೆಯನ್ನಾಗಿ ರೂಪಿಸಿಕೊಳ್ಳುತ್ತಿದ್ದಾರೆ. ಹೊಸಬರನ್ನು ಭಾರೀ ಸಂಖ್ಯೆಯಲ್ಲಿ ಐಸಿಸ್ ಸೇರಿಸಿ ಕೊಳ್ಳುತ್ತಿದ್ದು, ಅವರಿಗೆ ಅಫ್ಘಾನಿಸ್ಥಾನ ದಲ್ಲಿ ತರಬೇತಿ ನೀಡಿ ಅಮೆರಿಕ ಮತ್ತು ಇತರ ಪಾಶ್ಚಾಮಾತ್ಯ ದೇಶಗಳ ವಿರುದ್ಧ ದಾಳಿಗೆ ಪ್ರಚೋದಿ ಸುತ್ತಿದೆ ಎಂದು ಅಮೆರಿಕ ಮತ್ತು ಅಫ್ಘಾನಿಸ್ಥಾನ ದ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.
ಅಫ್ಘಾನಿಸ್ಥಾನದಲ್ಲಿ ಅಸ್ತಿತ್ವದಲ್ಲಿದ್ದ ತಾಲಿಬಾನ್‌ಗೂ ಹೆಚ್ಚು ಅಪಾಯಕಾರಿ ಮಟ್ಟವನ್ನು ಐಸಿಸ್ ತಲುಪಿದೆ. ಯಾಕೆಂದರೆ ಐಸಿಸ್ ಉಗ್ರರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ ಹಾಗೂ ಈ ಉಗ್ರರು ಅಫ್ಘಾನಿಸ್ಥಾನ ಮತ್ತು ಇತರ ದೇಶಗಳ ನಾಗರಿಕರ ಮೇಲೇ ದಾಳಿ ನಡೆಸುತ್ತವೆ. ಭದ್ರತಾ ಅಧಿಕಾರಿಗಳ ಪ್ರಕಾರ ಐಸಿಸ್ ಜತೆಗೆ ತಾಲಿಬಾನ್ ಕೂಡ ಕೈಜೋಡಿಸಿದ್ದು ಭಾರೀ ಅಪಾಯವನ್ನೇ ಉಂಟು ಮಾಡ ಬಹುದಾಗಿದೆ. ಇತ್ತೀಚೆಗೆ ಕಾಬುಲ್‌ನಲ್ಲಿ ನಡೆದ ಸ್ಫೋಟಗಳು ಇದರ ಮುನ್ಸೂಚನೆ ಎನ್ನಲಾಗಿದೆ.
ನಂಗರ್‌ಹರ್ ಪ್ರಾಂತ್ಯವೇ ನೆಲೆ: ಅಫ್ಘಾನಿಸ್ಥಾನ ದ ನಂಗರ್‌ಹರ್ ಪ್ರಾಂತ್ಯದಲ್ಲಿ ಐಸಿಸ್ ಬೇರು ಬಿಟ್ಟಿದೆ. ಇದು ಪಾಕಿಸ್ಥಾನದ ಗಡಿಗೆ ಹೊಂದಿಕೊಂಡಿದೆ. ಈ ಭಾಗ ಗುಡ್ಡಗಾಡಿನಿಂದ ಕೂಡಿದ್ದು, ಈ ಭಾಗದಲ್ಲಿ ಅಮೆರಿಕದ ಸೇನೆ ಕಾರ್ಯಾಚರಣೆ ನಡೆಸುವುದೂ ಅತ್ಯಂತ ಕಷ್ಟದಾಯಕ. ನಂಗರ್‌ಹರ್‌ನಲ್ಲಿ ನೆಲೆಯೂರಲು ಆರಂಭಿಸಿದ ಉಗ್ರರು, ಅನಂತರ ನೂರಿಸ್ಥಾನ್, ಕುನಾರ್ ಮತ್ತು ಲಘ…ಮನ್ ಪ್ರಾಂತ್ಯಕ್ಕೂ ವ್ಯಾಪಿಸಿವೆ.
ಇಲ್ಲಿ ಉಗ್ರರು ಅತ್ಯಾಧುನಿಕ ಶಸ್ತ್ರಾಸ್ತ್ರ ಗಳನ್ನು ಸಂಗ್ರಹಿಸುವುದು, ಸಾಗಣೆ ಮಾಡು ವುದು ಅತ್ಯಂತ ಸುಲಭ. ಅಷ್ಟೇ ಅಲ್ಲ, ಶಸ್ತ್ರಾಸ್ತ್ರಗಳನ್ನು ಅಮೆರಿಕದ ರಾಡಾರ್ ಮತ್ತು ಕಾಪ್ಟರ್‌ಗಳ ಕಣ್ಣಿಗೆ ಬೀಳದಂತೆ ಕಾಪಾಡ ಬಹುದು. ಹೀಗಾಗಿ ಇದು ಅಮೆರಿಕ ಪಡೆಗಳಿಗೆ ಭಾರೀ ತಲೆನೋವಾಗಿ ಪರಿಣಮಿಸಿದೆ.
2005ರಲ್ಲಿ ಇದೇ ಭಾಗದಲ್ಲಿ ಎತ್ತರದ ಪರ್ವತದ ಮೇಲಿನಿಂದ ರಾಕೆಟ್ ಉಡಾಯಿಸಿ ಅಮೆರಿಕದ ಚಿನೂಕ್ ಕಾಪ್ಟರ್ ಅನ್ನು ಐಸಿಸ್ ಉರುಳಿಸಿತ್ತು. ಆಗ 16 ಅಮೆರಿಕದ ಯೋಧರು ಸಾವನ್ನಪ್ಪಿದ್ದರು. ಕಳೆದ 18 ವರ್ಷಗಳಿಂದಲೂ ಅಮೆರಿಕ ಇಲ್ಲಿ ತಾಲಿಬಾನ್ ವಿರುದ್ಧ ಹೋರಾಟ ನಡೆಸು ತ್ತಿದ್ದರೂ, ತಾಲಿಬಾನ್ ಅನ್ನು ಸಂಪೂರ್ಣ ವಾಗಿ ಮಟ್ಟಹಾಕಲು ಸಾಧ್ಯವಾಗಲಿಲ್ಲ. ಆದರೆ ಇದೇ ವೇಳೆ, ಮತ್ತೂಂದು ತಲೆ ನೋವು ಕೂಡ ಇಲ್ಲಿ ಬೇರುಬಿಟ್ಟಿದೆ.
ಸಾವಿರಾರು ಉಗ್ರರಿದ್ದಾರೆ!: ನಂಗರ್‌ಹರ್ ಪ್ರಾಂತೀಯ ಆಡಳಿತ ಸಮಿತಿಯ ಸದಸ್ಯ ಅಜ್ಮಲ್ ಓಮರ್ ಹೇಳುವಂತೆ ಈ ಭಾಗದಲ್ಲಿ ಮೊದಲು 150 ಐಸಿಸ್ ಉಗ್ರರಿದ್ದರು. ಈಗ ಸಾವಿರಾರು ಉಗ್ರರು ಇಲ್ಲಿ ಸೇರಿಕೊಂಡಿ ದ್ದಾರೆ. ಸದ್ಯದ ಮಟ್ಟಿಗಂತೂ ಐಸಿಸ್ ಮೂಲ ಧ್ಯೇಯವೇ ಈ ಭಾಗದಲ್ಲಿ ತನ್ನ ಉಗ್ರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದಾಗಿದೆ.