Advertisement

ಗೆರಿಲ್ಲಾ ಯುದ್ಧಕ್ಕೆ ಐಸಿಸ್‌ ಕರೆ

01:28 AM May 26, 2019 | Sriram |

ಕೈರೋ: ಇರಾಕ್‌ ಹಾಗೂ ಸಿರಿಯಾದಲ್ಲಿ ಅಮೆರಿಕದ ಸೇನಾ ದಾಳಿಯಿಂದಾಗಿ ನೆಲೆ ಕಳೆದುಕೊಂಡಿರುವ ಐಸಿಸ್‌ ಉಗ್ರರು ಈಗ ಗೆರಿಲ್ಲಾ ಯುದ್ಧ ತಂತ್ರ ಗಳನ್ನು ಅಳವಡಿಸಿ ಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ ಎನ್ನ ಲಾಗಿದೆ. ಈ ಸಂಬಂಧ ಐಸಿಸ್‌ನ ಆನ್‌ಲೈನ್‌ ಸುದ್ದಿ ತಾಣ ಅಲ್‌ ನಬಾದಲ್ಲಿ ಗೆರಿಲ್ಲಾ ಯುದ್ಧ ತಂತ್ರಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಮತ್ತು ಅದರ ಪ್ರಕಾರ ಹೇಗೆ ದಾಳಿ ಮಾಡಬೇಕು ಎಂಬ ವಿವರಣೆಯನ್ನು ಪ್ರಕಟಿಸಲಾಗಿದೆ.

Advertisement

ಸಾಮಾನ್ಯವಾಗಿ ಹೊಸ ಪ್ರದೇಶಗಳಲ್ಲಿ ತನ್ನ ಆಧಿಪತ್ಯ ಸ್ಥಾಪಿಸಲು ಐಸಿಸ್‌ ಈ ತಂತ್ರವನ್ನು ಬಳಸುತ್ತಿತ್ತು. ಕಳೆದ ಕೆಲವು ತಿಂಗಳುಗಳಿಂದ ಸಿರಿಯಾ ಮತ್ತು ಇರಾಕ್‌ನಲ್ಲಿ ಬಹುತೇಕ ಪ್ರದೇಶಗಳನ್ನು ಐಸಿಸ್‌ ಕಳೆದುಕೊಂಡಿದ್ದರಿಂದ ತನ್ನ ಮೊದಲಿನ ತಂತ್ರಕ್ಕೆ ವಾಪಸಾಗಿದೆ ಎನ್ನ ಲಾಗುತ್ತಿದೆ. ಅಲ್ಲದೆ, ಇದೇ ತಂತ್ರವನ್ನು ಬಳಸಿ ಹಲವು ಬಾರಿ ಈ ಉಗ್ರ ಸಂಘಟನೆ ತನ್ನನ್ನು ಮತ್ತೆ ಬಲಗೊಳಿಸಿಕೊಂಡಿದೆ. ಹೀಗಾಗಿ ಐಸಿಸ್‌ನ ಈ ಕಾರ್ಯತಂತ್ರ ಅತ್ಯಂತ ಅಪಾಯ ಕಾರಿ ಎಂದು ಹೇಳಲಾಗಿದೆ.

ಇದೇ ತಂತ್ರವನ್ನೇ ಬಳಸಿ ಐಸಿಸ್‌ ಉಗ್ರರು ದೇಶದ ಹಲವೆಡೆ ದಾಳಿ ಆರಂಭಿಸಿದ್ದಾರೆ. 2014ರಲ್ಲಿ ಐಸಿಸ್‌ ಉಗ್ರ ಮುಖಂಡ ಅಬೂ ಬಕ್ಕರ್‌ ಅಲ್‌ ಬಾಗ್ಧಾದಿ ಹೋರಾಡುತ್ತಲೇ ಇರಿ ಎಂಬ ಒಂದು ವಿಡಿಯೋವನ್ನು ಮಾಡಿದ್ದು, ಇದು ಐಸಿಸ್‌ ಉಗ್ರರಲ್ಲಿ ಭಾರಿ ಸಂಚರಿಸತೊಡಗಿದೆ. ಅಲ್ಲದೆ, ಇದೇ ವಿಡಿಯೋವನ್ನು ಇಟ್ಟುಕೊಂಡು ಯುವಕ ರನ್ನು ಐಸಿಸ್‌ ಸೆಳೆಯುತ್ತಿದೆ. ಕಳೆದ ಏಪ್ರಿಲ್‌ನಲ್ಲಿ ಇದೇ ತಂತ್ರವನ್ನು ಬಳಸಿ ಲಿಬಿಯಾದಲ್ಲಿ ಒಂದು ಪ್ರಾಂತ್ಯವನ್ನು ಕೆಲವು ಹೊತ್ತು ವಶಪಡಿಸಿಕೊಂಡಿದ್ದರು. ಮುನಿಸಿಪಲ್‌ ಕೇಂದ್ರ ಕಚೇರಿಗೆ ದಾಳಿ ಮಾಡಿ, ಅಲ್ಲಿನ ಮುಖ್ಯಸ್ಥರನ್ನು ಹತ್ಯೆಗೈದಿದ್ದ ಉಗ್ರರು, ನಂತರ ನಾಪತ್ತೆಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next