Advertisement

ಐಸಿಸ್‌ ನಂಟು: ಬಾಲಕ ಸೇರಿ 9 ಮಂದಿ ಸೆರೆ

12:30 AM Jan 24, 2019 | |

ಹೊಸದಿಲ್ಲಿ: ಕುಖ್ಯಾತ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯಾದ ಐಸಿಸ್‌ ಜತೆಗೆ ನಂಟು ಹೊಂದಿರುವ ಆರೋಪದಡಿ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್‌), ಬುಧವಾರ, 17 ವರ್ಷದ ಬಾಲಕ ಸೇರಿದಂತೆ ಶಂಕಿತ ಒಂಭತ್ತು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಹಲವಾರು ದಿನಗಳಿಂದ ಇವರ ಮೇಲೆ ನಿಗಾ ವಹಿಸಿದ್ದ ಎಟಿಎಸ್‌, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಇವರನ್ನು ಬಂಧಿಸಿದೆ.  ಮುಂಬಾ, ಥಾಣೆ ಮತ್ತು ಔರಂಗಾಬಾದ್‌ ಸೇರಿದಂತೆ ಒಟ್ಟು 5 ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು. ಔರಂಗಾ ಬಾದ್‌ನಲ್ಲಿ ನಾಲ್ವರನ್ನು ಬಂಧಿಸಲಾಗಿದ್ದರೆ, ಮುಂಬ್ರಾದಲ್ಲಿ ಐವರನ್ನು ಸೆರೆ ಹಿಡಿಯಲಾಗಿದೆ. ಬಂಧಿತರ ಗುಂಪು, ಐಎಸಿಸ್‌ ಸಂಘಟನೆಯ ಸ್ಲಿಪರ್‌ ಸೆಲ್‌ಗ‌ಳಂತೆ ಕೆಲಸ ಮಾಡುತ್ತಿತ್ತೇ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಎಟಿಎಸ್‌ ತಿಳಿಸಿದೆ. ಬಂಧಿತರಲ್ಲಿ ಇಬ್ಬರು ಸಹೋದರರೂ ಇದ್ದು, ಇವರು ಬೆಂಗಳೂರಿನಲ್ಲಿ ಮದುವೆಯೊಂದರಲ್ಲಿ ಪಾಲ್ಗೊಂಡು ಭಾನುವಾರವಷ್ಟೇ ಮಹಾರಾಷ್ಟ್ರಕ್ಕೆ ಹಿಂದಿರುಗಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next