Advertisement

ಲಸಿಕೆ ಪೂರೈಸಲು ಈಶ್ವರ್‌ಖಂಡ್ರೆ ಒತ್ತಾಯ

01:18 PM May 12, 2021 | Team Udayavani |

ಬೆಂಗಳೂರು:ರಾಜ್ಯಕ್ಕೆ ಅಗತ್ಯ ಪ್ರಮಾಣದ ಲಸಿಕೆ ಪೂರೈಸಲು ಕೇಂದ್ರದ ಮೇಲೆ ಒತ್ತಡ ತರುವಲ್ಲಿ ರಾಜ್ಯಸರ್ಕಾರ ಹಾಗೂಸಂಸದರು ವಿಫಲರಾಗಿದ್ದು ಅವರ ಬಾಯಿ ಸತ್ತು ಹೋಗಿದೆಯೇಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಈ ಕುರಿತು ಟ್ವಿಟ್‌ ಮಾಡಿರುವ ಅವರು,ಕೊರೊನಾ ಪ್ರಕರಣಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದರೂ ಕೇಂದ್ರಸರ್ಕಾರ ಆಗತ್ಯ ಪ್ರಮಾಣದ ಲಸಿಕೆ ಪೂರೈಸುತ್ತಿಲ್ಲ.14 ರಾಜ್ಯಗಳಿಗೆಮೇ 1 ರಿಂದಲೇ ಲಸಿಕೆ ಕೊಡಲಾಗಿದೆ. ನಮ್ಮಲ್ಲಿ 11ದಿನಗಳಾದರೂ ಬಂದಿಲ್ಲ. 25 ಬಿಜೆಪಿ ಸಂಸದರನ್ನು ಗೆಲ್ಲಿಸಿದ್ದಕ್ಕೆರಾಜ್ಯಕ್ಕೆ ತಕ್ಕ ಮರ್ಯಾದೆ ಸಿಗುತ್ತಿದೆ ಎಂದು ಹೇಳಿದ್ದಾರೆ.

ಕರ್ನಾಟಕ್ಕೆ ಆಕ್ಸಿಜನ್‌ ಬಂದಿದ್ದು ಹೈಕೋರ್ಟ್‌ ಆದೇಶದಿಂದ.ಅದನ್ನು ನರೇಂದ್ರ ಮೋದಿ ಸರ್ಕಾರ ಸುಪ್ರಿಂಕೋರ್ಟ್‌ನಲ್ಲಿ ಪ್ರಶ್ನಿಸಿಮುಖಭಂಗ ಅನುಭವಿಸಿತು. ಇದು ರಾಜ್ಯದ ಬಗ್ಗೆ ಕೇಂದ್ರಕ್ಕೆಇರುವ ನಿರ್ಲಕ್ಷéಕ್ಕೆ ಸಾಕ್ಷಿ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next