Advertisement

ಮೀಸಲಾತಿ ಹೋರಾಟಕ್ಕೆ ಬರೋದು ಸಿದ್ದುಗೆ ಬಿಟ್ಟ ವಿಚಾರ: ಈಶ್ವರಪ್ಪ

03:47 PM Feb 09, 2021 | Adarsha |

ಶಿವಮೊಗ್ಗ: ಎಸ್‌ಟಿ ಮೀಸಲಾತಿಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆದ ಕುರುಬರ ಸಮಾವೇಶ ಯಶಸ್ವಿಯಾಗಿದ್ದು, ಮುಂದಿನ ಹಂತದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಕುರುಬರ ಮೀಸಲಾತಿ ಹೋರಾಟಕ್ಕೆ ಬಂದರೆ ಸಂತೋಷ. ಬಾರದಿದ್ದರೆ ಅವರಿಗೆ ಬಿಟ್ಟ ವಿಚಾರ. ಸಮುದಾಯ ಅವರನ್ನು ಸಿಎಂ ಮಾಡಿದೆ. ಅವರೊಬ್ಬರನ್ನು ಬಿಟ್ಟು ಎಲ್ಲರೂ ಪಕ್ಷಾತೀತವಾಗಿ ಭಾಗಿಯಾಗಿದ್ದಾರೆ ಎಲ್ಲರೂ ಒಟ್ಟಿಗೆ ಇರಬೇಕೆಂದು ಸಮುದಾಯದ ಜನರು ಅಪೇಕ್ಷೆ ಪಟ್ಟಿದ್ದರು. ಸ್ವಾಮೀಜಿಗಳು ಅವರ ನಿವಾಸಕ್ಕೆ ತೆರಳಿ ಕರೆದಿದ್ದರು. ನಾನು ಕೂಡ ಕರೆ ಮಾಡಿದ್ದೆ. ಮೊದಲಿಗೆ ಯಾರೂ ನನ್ನನ್ನು ಕರೆದಿಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ಬಳಿಕ ಪಾದಯಾತ್ರೆಗೆ ಆರ್‌ಎಸ್‌ಎಸ್‌ ಹಣಕೊಟ್ಟಿದೆ ಎಂದು ಆರೋಪ ಮಾಡಿದ್ದರು.

ಹೋರಾಟಕ್ಕೆ ಆರ್‌ಎಸ್‌ಎಸ್‌ ಹಣ ಕೊಟ್ಟಿಲ್ಲ. ಸಮುದಾಯದ ಜನರೇ ಹಣ ನೀಡಿ ಸಮಾವೇಶ ಮಾಡಿದ್ದಾರೆ ಎಂದರು. ಕುರುಬ ಸಮುದಾಯದ ಇತಿಹಾಸದಲ್ಲಿಯೇ ದೊಡ್ಡ ಕಾರ್ಯಕ್ರಮ ನಡೆದಿದೆ. ನಿರಂಜನಾನಂದಪುರಿ ಶ್ರೀಗಳು, ಈಶ್ವರಾನಂದಪುರಿ ಶ್ರೀಗಳು ಸೇರಿದಂತೆ ಸಮುದಾಯದ ಗುರುಗಳು, ಹಿರಿಯರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ ವ್ಯವಸ್ಥಿತವಾಗಿ ಶಿಸ್ತಿನಿಂದ ಸಮಾವೇಶ ನಡೆಸಲಾಗಿದೆ. ಸ್ವಾತಂತ್ರಕ್ಕಿಂತ ಮೊದಲು ಇದ್ದಂತೆ ಮತ್ತು ಈಗ 4 ರಾಜ್ಯಗಳಲ್ಲಿ ಇರುವಂತೆ ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡಬೇಕೆನ್ನುವುದು ಒತ್ತಾಯವಾಗಿದೆ ಎಂದರು.

ಇದನ್ನೂ ಓದಿ:ಧರ್ಮಪ್ರಜ್ಞೆ-ಸಂಸ್ಕಾರಜೀವನದ ಆಸ್ತಿಯಾಗಲಿ

ಮುಖ್ಯಮಂತ್ರಿಗಳು ಕುರುಬ ಸಮುದಾಯಕ್ಕೆ ಅನುದಾನ ನೀಡಿದ್ದಾರೆ. ಕನಕ ಜಯಂತಿಗೆ ರಜೆ ನೀಡಿದ್ದಾರೆ. ಇದರೊಂದಿಗೆ ಎಸ್‌ಟಿ ಮೀಸಲಾತಿ ನೀಡಬೇಕೆಂದು ಸ್ವಾಮೀಜಿಗಳು ಸಮಾವೇಶದಲ್ಲಿ ಒತ್ತಾಯಿಸಿದ್ದು, ಮುಂದಿನ ಹಂತದಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡಲು ಸಿಎಂ ಜತೆಗೆ ಮೀಸಲಾತಿ ಹೋರಾಟ ಸಮಿತಿ ಚರ್ಚಿಸಲಿದೆ. ಸಚಿವಸಂಪುಟ ಸಭೆಯಲ್ಲಿ ತೀರ್ಮಾನಿಸಿ ಕೇಂದ್ರಕ್ಕೆ ಶಿಫಾರಸು ಮಾಡಲಿದ್ದು, ಪ್ರಧಾನಿ  ಮತ್ತು ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಕುರುಬರ ಸಮಾವೇಶಕ್ಕೆ ಹಣ ಕೊಟ್ಟು ಜನರನ್ನು ಕರೆತಂದಿಲ್ಲ. ವಾಹನಗಳಿಗೂ ಹಣ ಕೊಟ್ಟಿಲ್ಲ. ಸಮುದಾಯದವರೆಲ್ಲ ತಮ್ಮ ಹಣದಲ್ಲೇ ಸಮಾವೇಶಕ್ಕೆ ಬಂದಿದ್ದಾರೆ. ಅನೇಕರು ಊಟ ಕೊಟ್ಟಿದ್ದಾರೆ. ಜನರೇ ಸೇರಿ ಕುರುಬರಸಮಾವೇಶ ಮಾಡಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಸಿಎಂ ಬಗ್ಗೆ ಮಾತನಾಡದಂತೆ ತಿಳಿಸಿದ್ದರೂ ಪದೇ ಪದೇ ಹೇಳಿಕೆ ನೀಡುತ್ತಿರುವುದರಿಂದ ಕೇಂದ್ರ ಶಿಸ್ತು ಸಮಿತಿಗೆ ವರದಿ ನೀಡಿರುವುದಾಗಿ ಪಕ್ಷದ ರಾಜ್ಯಾಧ್ಯಕ್ಷರು ತಿಳಿಸಿದ್ದು, ಕೇಂದ್ರ ಸಮಿತಿ ಕ್ರಮ ಕೈಗೊಳ್ಳಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next