Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದಲ್ಲಿ ಆರ್ಥಿಕ ಸಂಕಷ್ಟ ಇದ್ದರೂ ಕೇಂದ್ರ ಸರ್ಕಾರ ರಾಜ್ಯದತ್ತ ತಿರುಗಿ ನೋಡಿಲ್ಲ. ರಾಜ್ಯಕ್ಕೆ ಬರಬೇಕಾದ ಅನುದಾನ ವನ್ನೇನೀಡಿಲ್ಲ. ಕೇಂದ್ರ ಇತ್ತೀಚೆಗೆ ಅನುದಾನ ಬಿಡುಗಡೆ ಮಾಡಿದ ರಾಜ್ಯಗಳಲ್ಲಿ ಕರ್ನಾಟಕದ ಹೆಸರಿಲ್ಲ ಎಂದರು. ಕೋವಿಡ್ ಪರಿಹಾರ ವಿತರಣೆಯಲ್ಲಿ ಕೇಂದ್ರ ಸಂಪೂರ್ಣ ವಿಫಲವಾಗಿದೆ. ಬೆಟ್ಟ ಅಗೆದು ಇಲಿ ಹಿಡಿ ದಂತಾಗಿದೆ. ಬರೀ ಮಾಯಾಬಜಾರ್ ತೋರಿಸಿ ಜನರನ್ನು ಯಾಮಾರಿಸುವ ಕೆಲಸ ವಾಗುತ್ತಿದೆ ಎಂದು ಟೀಕಿಸಿದರು. ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದು ಆರ್ಥಿಕತೆಯ ಮೇಲೆ ಹೊಡೆತ ನೀಡಲಿದೆ. ಸದನದಲ್ಲಿ ಚರ್ಚೆಯಾಗದೆ ಕಾಯ್ದೆ ಜಾರಿ ಮಾಡಬಾರದು.