Advertisement

ಇಶಾಂತ್‌ ಗಾಯಾಳು: ನ್ಯೂಜಿಲ್ಯಾಂಡ್‌ ಪ್ರವಾಸಕ್ಕೆ ಅನುಮಾನ

10:28 AM Jan 22, 2020 | Team Udayavani |

ಹೊಸದಿಲ್ಲಿ: ಟೀಮ್‌ ಇಂಡಿಯಾದ ಹಿರಿಯ ಬೌಲರ್‌ ಇಶಾಂತ್‌ ಶರ್ಮ ರಣಜಿ ಪಂದ್ಯದ ವೇಳೆ ಗಾಯಾಳಾಗಿದ್ದಾರೆ. ಹೀಗಾಗಿ ಮುಂಬರುವ ನ್ಯೂಜಿಲ್ಯಾಂಡ್‌ ಪ್ರವಾಸದ ಟೆಸ್ಟ್‌ ಸರಣಿಗೆ ಲಭ್ಯರಾಗುವುದು ಅನುಮಾನ ಎನ್ನಲಾಗಿದೆ.

Advertisement

ಸೋಮವಾರದ ವಿದರ್ಭ ಎದುರಿನ ರಣಜಿ ಪಂದ್ಯದ ವೇಳೆ ಇಶಾಂತ್‌ ಶರ್ಮ ಕಾಲು ಉಳುಕಿಸಿಕೊಂಡಿದ್ದು, ಹಿಮ್ಮಡಿಯಲ್ಲಿ ಊತ ಕಂಡುಬಂದಿದೆ.

ಅವರನ್ನು ಈ ಪಂದ್ಯದಲ್ಲಿ ಮುಂದುವರಿಸುವುದಿಲ್ಲ ಎಂದು ದಿಲ್ಲಿ ತಂಡದ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

ಈ ನೋವು ವಾಸಿಯಾಗಲು ಇನ್ನೂ ಕೆಲವು ದಿನಗಳ ಅಗತ್ಯವಿದೆ. ಅವರು ಬೆಂಗಳೂರಿನ ಎನ್‌ಸಿಎಯಲ್ಲಿ ಪುನಶ್ಚೇತನ ಪ್ರಕ್ರಿಯೆಯಲ್ಲಿ ತೊಡಗಬೇಕಿದ್ದು, ಅಲ್ಲಿ “ರಿಟರ್ನ್ ಟು ಪ್ಲೇ’ ಸರ್ಟಿಫಿಕೇಟ್‌ ಪಡೆಯಬೇಕಿದೆ.

ವಿದರ್ಭ ಆಟಗಾರ ಫೈಜ್‌ ಫ‌ಜಲ್‌ಗೆ ಎಸೆದ ಚೆಂಡು ಕಾಲಿಗೆ ಬಡಿದಾಗ ಇಶಾಂತ್‌ ಲೆಗ್‌ಬಿಫೋರ್‌ಗೆ ಬಲವಾದ ಮನವಿ ಮಾಡುತ್ತಿದ್ದರು. ಆಗ ಅವರತ್ತಲೇ ಬರುತ್ತಿದ್ದ ಚೆಂಡನ್ನು ತಡೆಯಲು ಮುಂದಾದಾಗ ಜಾರಿ ಬಿದ್ದು ಕಾಲಿಗೆ ಏಟು ಮಾಡಿಕೊಂಡರು.

Advertisement

ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಮೊದಲ ಟೆಸ್ಟ್‌ಗೆ ಇನ್ನೂ ಒಂದು ತಿಂಗಳ ಅವಧಿ ಇದೆ (ಫೆ. 21-25). ಅಷ್ಟರಲ್ಲಿ ಇಶಾಂತ್‌ ಗುಣಮುಖರಾದರೆ ಭಾರತ ತಂಡವನ್ನು ಸೇರಿಕೊಳ್ಳಬಹುದು. ಈ ಸರಣಿಯಲ್ಲಿ 2 ಟೆಸ್ಟ್‌ ಪಂದ್ಯಗಳು ನಡೆಯಲಿವೆ.

ಧವನ್‌ ಕೂಡ ಗಾಯಾಳು
ಆಸ್ಟ್ರೇಲಿಯ ವಿರುದ್ಧದ 3ನೇ ಏಕದಿನ ಪಂದ್ಯದ ವೇಳೆ ಗಾಯಾಳಾದ ಶಿಖರ್‌ ಧವನ್‌ ಕೂಡ ನ್ಯೂಜಿಲ್ಯಾಂಡ್‌ ಸರಣಿಯಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಫಿಂಚ್‌ ಹೊಡೆತವೊಂದನ್ನು ತಡೆಯಲು ಧವನ್‌ ಡೈವ್‌ ಹೊಡೆದಾಗ ಅವರ ಭುಜಕ್ಕೆ ಏಟು ಬಿದ್ದಿತ್ತು. ಅನಂತರ ಕ್ಷೇತ್ರರಕ್ಷಣೆಯಿಂದ ಹೊರನಡೆದರು. ಬ್ಯಾಟಿಂಗ್‌ಗೂ ಬರಲಿಲ್ಲ. ಕೊನೆಯಲ್ಲಿ ಕೈಗೆ ಬ್ಯಾಂಡೇಜ್‌ ಸುತ್ತಿಕೊಂಡು ಕಾಣಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next