Advertisement

ಅಭ್ಯಾಸ ಪಂದ್ಯದಲ್ಲಿ ಭಾರತ ಮೇಲುಗೈ

11:29 PM Aug 19, 2019 | Team Udayavani |

ಕೂಲಿಜ್‌ (ಆ್ಯಂಟಿಗುವಾ): ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಬಿಗಿಯಾದ ದಾಳಿ ಸಂಘಟಿಸಿದ್ದಾರೆ. ಭಾರತ 5 ವಿಕೆಟಿಗೆ 297 ರನ್‌ ಪೇರಿಸಿ ಡಿಕ್ಲೇರ್‌ ಮಾಡಿದ ಬಳಿಕ, ವೆಸ್ಟ್‌ ಇಂಡೀಸ್‌ ಎ ತಂಡವನ್ನು 56.1 ಓವರ್‌ಗಳಲ್ಲಿ 181ಕ್ಕೆ ಆಲೌಟ್‌ ಮಾಡಿದೆ.

Advertisement

ಇಶಾಂತ್‌ ಶರ್ಮ, ಉಮೇಶ್‌ ಯಾದವ್‌ ಮತ್ತು ಕುಲದೀಪ್‌ ಯಾದವ್‌ ತಲಾ 3 ವಿಕೆಟ್‌ ಉರುಳಿಸಿದರು.

3ನೇ ದಿನದಾಟದಲ್ಲಿ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ಭಾರತ, ಭೋಜನ ವಿರಾಮದ ವೇಳೆ 5 ವಿಕೆಟಿಗೆ 174 ರನ್‌ ಗಳಿಸಿದೆ. ಆರಂಭಿಕನಾಗಿ ಇಳಿದ ಅಜಿಂಕ್ಯ ರಹಾನೆ 54, ವನ್‌ಡೌನ್‌ನಲ್ಲಿ ಬಂದ ಹನುಮ ವಿಹಾರಿ 64 ರನ್‌ ಬಾರಿಸಿ ಮಿಂಚಿದರು. ಮಾಯಾಂಕ್‌ ಅಗರ್ವಾಲ್‌ (13), ರಿಷಭ್‌ ಪಂತ್‌ (19) ಮತ್ತು ರವೀಂದ್ರ ಜಡೇಜ (9) ಬೇಗನೇ ಔಟಾದರು.

ಸೋಮವಾರ ಪಂದ್ಯದ ಅಂತಿಮ ದಿನವಾಗಿದ್ದು ಭಾರತ ಮುಂಬರುವ ಟೆಸ್ಟ್‌ ಸರಣಿಗೆ ಬ್ಯಾಟಿಂಗ್‌ ತಾಲೀಮು ನಡೆಸುವ ಯೋಜನೆಯಲ್ಲಿದೆ. ಸರಣಿಯ ಮೊದಲ ಟೆಸ್ಟ್‌ ಪಂದ್ಯ ಆ. 22ರಿಂದ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next