Advertisement

ಭಾರತ ಟೆಸ್ಟ್‌ ತಂಡದಲ್ಲಿ ಇಶಾಂತ್‌, ಪೃಥ್ವಿಗೆ ಸ್ಥಾನ

09:05 AM Feb 20, 2020 | keerthan |

ವೆಲ್ಲಿಂಗ್ಟನ್‌: ಶುಕ್ರವಾರದಿಂದ ಭಾರತ-ನ್ಯೂಜಿಲೆಂಡ್‌ ನಡುವೆ ಆರಂಭವಾಗಲಿರುವ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ, ವೇಗಿ ಇಶಾಂತ್‌ ಶರ್ಮ, ಮುಂಬೈನ ಯುವ ಆರಂಭಿಕ ಪೃಥ್ವಿ ಶಾ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಈ ಸುಳಿವನ್ನು ಸ್ವತಃ ನಾಯಕ ವಿರಾಟ್‌ ಕೊಹ್ಲಿ ಬಿಟ್ಟುಕೊಟ್ಟಿದ್ದಾರೆ.

Advertisement

ಹಿಮ್ಮಡಿ ಗಾಯಕ್ಕೊಳಗಾಗಿ ದೀರ್ಘ‌ಕಾಲ ಟೆಸ್ಟ್‌ ತಂಡದಿಂದ ಹೊರಬಿದ್ದಿದ್ದ ಇಶಾಂತ್‌ ಬಗ್ಗೆ ಕೊಹ್ಲಿ ಭರವಸೆಯಮಾತನಾಡಿದರು. ಹಾಗೆಯೇ ಪೃಥ್ವಿ ಶಾ ಅದ್ಭುತ ಆಟಗಾರ, ಅವರ ಸಹಜ ಆಟದಶೈಲಿಯನ್ನು ಬದಲಾಯಿಸುವ ಇರಾದೆಯೂ ಇಲ್ಲ. ಅವರು ತಮ್ಮ ಎಂದಿನ ಆಟವನ್ನೇ ಆಡಲಿ ಎನ್ನುವುದು ನಮ್ಮ ಬಯಕೆ ಎಂದು ಕೊಹ್ಲಿ ಹೇಳಿದರು.

ಈ ಮಾತುಗಳು ಮೇಲಿನಿಬ್ಬರ ಅದೃಷ್ಟ ಖುಲಾಯಿಸಿದೆ ಎನ್ನುವುದರ ಸೂಚನೆ. ಆದರ ಶುಬನ್‌ ಗಿಲ್‌ ಮತ್ತೆ ಹೊರಕ್ಕುಳಿಯಬೇಕಾಗುತ್ತದೆ. ಅಲ್ಲಿಗೆ ರೋಹಿತ್‌ ಶರ್ಮ ಅನುಪಸ್ಥಿತಿಯಲ್ಲಿ ಮಾಯಾಂಕ್‌ ಅಗರ್ವಾಲ್‌ ಮತ್ತು ಪೃಥ್ವಿ ಶಾ ಇನಿಂಗ್ಸ್‌ ಆರಂಭಿಸಬಹುದು. ವೇಗಿ ಇಶಾಂತ್‌ಗೆ ಮೊಹಮ್ಮದ್‌ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ಸಾಥ್‌ ನೀಡಲಿದ್ದಾರೆ. ಈ ಮಧ್ಯೆ ರವೀಂದ್ರ ಜಡೇಜರನ್ನು ಹಿಂದಿಕ್ಕಿ ರವಿಚಂದ್ರನ್‌ ಅಶ್ವಿ‌ನ್‌ ಆಯ್ಕೆಯಾಗಲಿದ್ದಾರೆ.

ಇನ್ನೂ ಮೂರು ವರ್ಷ ಮೂರೂ ಮಾದರಿಯಲ್ಲಿ ಆಟ: ಮಾಧ್ಯಮದವರೊಂದಿಗೆ ಮಾತನಾಡುವಾಗ ಇನ್ನೊಂದು ಮಹತ್ವದ ಸಂಗತಿಯನ್ನು ಕೊಹ್ಲಿ ಬಹಿರಂಗಪಡಿಸಿದರು. ಇನ್ನೂ ಮೂರು ವರ್ಷ ಅವರು ಎಷ್ಟೇ ಒತ್ತಡ ಎದುರಾದರೂ, ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಆಡುತ್ತಾರಂತೆ. ಆಮೇಲೆ ಅವರು ತಮ್ಮ ಮುಂದಿನ ನಡೆಯನ್ನು ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next