Advertisement

ISHA: ಸಸ್ಯವರ್ಗ ಬೆಳೆದರಷ್ಟೇ ಕಾವೇರಿಗೆ ಉಳಿವು- ನದಿ ಸಮೃದ್ಧಿ ಹೆಚ್ಚಿಸಲು ಸದ್ಗುರು ಕರೆ

08:48 PM Sep 29, 2023 | Team Udayavani |

ನವದೆಹಲಿ: ಕಾವೇರಿ ನದಿನೀರು ಹಂಚಿಕೆ ವಿಚಾರವಾಗಿ ಪ್ರತಿಭಟನೆಗಳು ಭುಗಿಲೆದ್ದಿರುವ ನಡುವೆಯೇ, ಸಸ್ಯವರ್ಗಗಳ ಅಭಿವೃದ್ಧಿ ಮಾತ್ರವೇ ಕಾವೇರಿ ಸಮಸ್ಯೆಗೆ ಪರಿಹಾರ ನೀಡಬಲ್ಲದು ಎಂದು ಈಶಾ ಫೌಂಡೇಶನ್‌ ಮಖ್ಯಸ್ಥರಾದ ಸದ್ಗುರು ಜಗ್ಗಿ ವಾಸುದೇವ್‌ ಹೇಳಿದ್ದಾರೆ. ಅಲ್ಲದೇ, ಬರಿದಾಗುತ್ತಿರುವ ಕಾವೇರಿಗಾಗಿ ಜಗಳವಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

Advertisement

ವಿವಾದ ಕುರಿತು ಎಕ್ಸ್‌(ಟ್ವಿಟರ್‌)ನಲ್ಲಿ ಪ್ರತಿಕ್ರಿಯಿಸಿರುವ ಸದ್ಗುರು, “ಕಾವೇರಿ ಮಾತೆಗೆ ತಾನು ಯಾವ ರಾಜ್ಯದವಳು, ಯಾವ ರಾಜ್ಯಕ್ಕೆ ಸೇರಿದವಳು ಎಂಬುದೇ ತಿಳಿದಿಲ್ಲ. ಆದರೆ, ಬೇಸಿಗೆಯಲ್ಲಿ ಒಣಗಿ ತಾನು ಬರಿದಾಗುತ್ತಿದ್ದೇನೆಂಬುದು ತಿಳಿದಿದೆ. ಕಾವೇರಿ ಜಲಾನಯನ ಪ್ರದೇಶದ 83,000 ಚದರ ಅಡಿ ಪ್ರದೇಶದಲ್ಲಿ ಸಸ್ಯವರ್ಗಗಳನ್ನು ಪೋಷಿಸಿದರೆ ಮಾತ್ರವೇ ಆಕೆ ಸಮೃದ್ಧವಾಗಿ ವರ್ಷದ 12 ತಿಂಗಳು ಹರಿಯಲು ಸಾಧ್ಯ. ಕಾವೇರಿ ಸಮಸ್ಯೆಗೆ ಸಸ್ಯವರ್ಗದ ಪೋಷಣೆ ಮಾತ್ರವೇ ಪರಿಹಾರ. ಈ ವಿಚಾರದಲ್ಲಿ ಜಗಳವಾಡುವುದರ ಬದಲು ತಾಯಿ ಕಾವೇರಿಯನ್ನು ಸಮೃದ್ಧಗೊಳಿಸಲು ಕೈ ಜೋಡಿಸೋಣ’ ಎಂದು ಕರೆ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next