Advertisement

ಇಶಾ ಅಂಬಾನಿ ಮದುವೆಗೆ ತಾರಾ ಮೆರುಗು!

09:00 AM Dec 09, 2018 | Team Udayavani |

ಉದಯ್‌ಪುರ: ಭಾರತದ ಅತಿ ದೊಡ್ಡ ಖಾಸಗಿ ಸಂಸ್ಥೆಯಾದ ರಿಲಯನ್ಸ್‌ ಕಂಪನಿಯ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿಯ ವಿವಾಹಾರ್ಥವಾಗಿ ಮೂರು ದಿನಗಳ ಸಂಭ್ರಮಾಚರಣೆಗೆ ಶನಿವಾರ ಚಾಲನೆ ಸಿಕ್ಕಿದೆ. “ಸಿಟಿ ಆಫ್ ಲೇಕ್ಸ್‌’ ಖ್ಯಾತಿಯ ಉದಯಪುರದಲ್ಲಿ ಜರುಗಲಿರುವ ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಜಗತ್ತಿನ 150ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕಂಪನಿಗಳ ಸಿಇಒಗಳು, ಅಮೆರಿಕದ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಪತ್ನಿ ಹಿಲರಿ ಕ್ಲಿಂಟನ್‌, ಬಾಲಿವುಡ್‌, ಹಾಲಿವುಡ್‌ ಹಾಗೂ ಕ್ರೀಡಾ ತಾರೆಗಳು, ರಾಜಕೀಯ ಗಣ್ಯರು ಆಗಮಿಸಿ ಈ ಶುಭ ವೇಳೆಯ ಮೆರುಗು ಹೆಚ್ಚಿಸಿದ್ದಾರೆ. ಮದುವೆಯ ಜತೆಗೆ ಧಾರ್ಮಿಕ ಚಟುವಟಿಕೆಗಳಲ್ಲೂ ಪಾಲ್ಗೊಂಡಿರುವ ಮುಕೇಶ್‌ ಕುಟುಂಬ, ಉದಯಪುರದಲ್ಲಿ ಶುಕ್ರವಾರದಿಂದ 4 ದಿನಗಳ ಕಾಲ ಅನ್ನಸಂತರ್ಪಣೆ ಆಯೋಜಿಸಿದೆ. ಮೊದಲ ದಿನ 5,100 ಮಂದಿ ಇಲ್ಲಿ ಭೋಜನ ಸವಿದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next