Advertisement

ಐಎಸ್‌ಸಿ: ಬೆಂಗಳೂರು ಬಾಲೆ ಪ್ರಥಮ

01:53 AM May 08, 2019 | Team Udayavani |

ಬೆಂಗಳೂರು: ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ ಎಕ್ಸಾಮಿನೇಷನ್ಸ್‌ (ಐಎಸ್‌ಸಿಇ) 2019ನೇ ಸಾಲಿನ 12ನೇ ತರಗತಿ ಪರೀಕ್ಷೆಯಲ್ಲಿ ಬೆಂಗಳೂರಿನ ಮಲ್ಯ ಅದಿತಿ ಇಂಟರ್‌ನ್ಯಾಶನಲ್‌ ಸ್ಕೂಲ್‌ನ ವಿದ್ಯಾರ್ಥಿನಿ ವಿಭಾ ಸ್ವಾಮಿನಾಥನ್‌ ಅವರು ದೇಶಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ. ಇಷ್ಟೇ ಅಂಕ ಗಳಿಸಿರುವ ಕೋಲ್ಕತಾದ ದೇವಾಂಗ್‌ ಕುಮಾರ್‌ ಅಗರ್ವಾಲ್‌ ಜತೆಗೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.

Advertisement

ಮಾರ್ಚ್‌ ತಿಂಗಳಲ್ಲಿ ನಡೆದ ಐಸಿಎಸ್‌ಇ ಮತ್ತು ಐಎಸ್‌ಸಿ ಪರೀಕ್ಷೆಯ ಫ‌ಲಿತಾಂಶ ಮಂಗಳವಾರ ಪ್ರಕಟ ಗೊಂಡಿದ್ದು, ರಾಜ್ಯದ ವಿಭಾ ಎಲ್ಲ ವಿಷಯಗಳಲ್ಲಿ ಶೇ.100 ಅಂಕ ಗಳಿಸಿದ್ದಾರೆ. ಇದರ ಜತೆಗೆ 12ನೇ ತರಗತಿಯಲ್ಲಿ ಮಲ್ಯ ಆದಿತಿ ಇಂಟರ್‌ನ್ಯಾಶನಲ್‌ ಶಾಲೆಯ ಫ‌ುಝೈಲ್‌ ನಯೀರ್‌ ಶೇ.99.75, ದೀಕ್ಷಾ ಬಾಲಾಜಿ ವಿಶ್ವನಾಥನ್‌ ಶೇ.99.50, ಮಿಹೀರ್‌ ರಾಜೇಂದ್ರ ರಾಜಮಾನೆ ಶೇ. 99.50 ಅಂಕ ಪಡೆದ ಕರ್ನಾಟಕದ ಇತರ ವಿದ್ಯಾರ್ಥಿಗಳು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕದ 321 ಐಸಿಎಸ್‌ಇ ಮತ್ತು 35 ಐಎಸ್‌ಸಿ ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ ಐಸಿಎಸ್‌ಇಯ 18,217 ಮತ್ತು ಐಎಸ್‌ಸಿಯ 1,769 ವಿದ್ಯಾರ್ಥಿಗಳು ಇದ್ದರು. ಐಸಿಎಸ್‌ಇ ಫ‌ಲಿತಾಂಶ ಶೇ.99.77 ಮತ್ತು ಐಎಸ್‌ಸಿ ಶೇ.99.49 ಬಂದಿದೆ. ಎರಡೂ ವಿಭಾಗ ಗಳಲ್ಲಿ ಬಾಲಕೀಯರೇ ಮೇಲುಗೈ ಸಾಧಿಸಿದ್ದಾರೆ.

16 ವಿದ್ಯಾರ್ಥಿಗಳಿಗೆ 2ನೇ ರ್‍ಯಾಂಕ್‌
ದೇಶವ್ಯಾಪಿಯಲ್ಲಿ ಶೇ. 99.75ರಷ್ಟು ಅಂಕಪಡೆದ 16 ವಿದ್ಯಾರ್ಥಿಗಳು 2ನೇ ರ್‍ಯಾಂಕ್‌ ಗಳಿಸಿದ್ದರೆ, ಶೇ. 99.50 ಅಂಕಗಳನ್ನು ಪಡೆದ 36 ವಿದ್ಯಾರ್ಥಿಗಳು 3ನೇ ರ್‍ಯಾಂಕ್‌ ಗಳಿಸಿದ್ದಾರೆ. ಮಂಗಳವಾರವೇ ಐಸಿಎಸ್‌ಇ 10ನೇ ತರಗತಿ ಪರೀûಾ ಫ‌ಲಿತಾಂಶವೂ ಪ್ರಕಟ ಗೊಂಡಿದ್ದು, ಮುಂಬಯಿಯ ಜೂಹಿ ರೂಪೇಶ್‌ ಕಜಾರಿಯಾ ಮತ್ತು ಮುಕ್‌¤ಸರ್‌ನ ಮನ್ಹಾರ್‌ ಬನ್ಸಾಲ್‌ ತಲಾ ಶೇ. 99.60ರಷ್ಟು ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next