Advertisement
ಗೂಗಲ್ ಸ್ಟೋರ್‌ಗೆ ಹೋಗಿ ನೋಡಿದರೆ ಆ ಮೊಬೈಲ್‌ನಲ್ಲಿರುವ ಆ್ಯಪ್‌ಗ್ಳು ಅಪ್‌ಡೇಟೇ ಆಗಿರುವುದಿಲ್ಲ! ಒಂದು ವರ್ಷ ಅಥವಾ 6 ತಿಂಗಳ ಹಿಂದೆ ಇದ್ದ ವರ್ಷನ್ ಇರುತ್ತದೆ! ಹೀಗಾದಾಗನಿಮ್ಮ ಮೊಬೈಲ್‌ನಲ್ಲಿರುವ ಅಪ್ಲಿಕೇಷನ್‌ಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಆದ್ದರಿಂದ ನಿಮ್ಮಮೊಬೈಲ್‌ನಲ್ಲಿರುವ ಎಲ್ಲ ಆ್ಯಪ್‌ಗ್ಳನ್ನು ಅಪ್ ಡೇಟ್ ಮಾಡಿ
Related Articles
Advertisement
ಮೊಬೈಲ್ ಫೋನ್ ಅಪ್‌ಡೇಟ್ ಕೊಡಿ :
ಆ್ಯಪ್‌ಗ್ಳನ್ನೆಲ್ಲ ಅಪ್‌ಡೇಟ್ ಕೊಡುವುದು ಒಂದು ಅಗತ್ಯ ಕೆಲಸವಾದರೆ, ಮೊಬೈಲ್ ಫೋನ್ ಕಂಪನಿ ಬಿಡುಗಡೆ ಮಾಡುವ ಅಪ್‌ಡೇಟ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವುದು ಸಹ ಇನ್ನೊಂದುಮುಖ್ಯ ಕೆಲಸ. ಒಂದು ಕಂಪನಿ ತನ್ನ ಒಂದು ಹೊಸಮೊಬೈಲ್ ಬಿಡುಗಡೆ ಮಾಡಿದ ಬಳಿಕ ಕನಿಷ್ಠ 2 ವರ್ಷಗಳ ಕಾಲ, ಅದಕ್ಕೆ ಹೊಸ ಅಪ್‌ಡೇಟ್‌ಗಳನ್ನುನೀಡುತ್ತದೆ. ಕೆಲವೊಂದು ಕಂಪೆನಿಗಳು ಪ್ರತಿತಿಂಗಳು ಸೆಕ್ಯುರಿಟಿ ಪ್ಯಾಚ್‌ಗಳನ್ನು ಅಪ್‌ಡೇಟ್‌ಮಾಡುತ್ತವೆ. ಆ ಮೊಬೈಲ್‌ನಲ್ಲಿರುವ ದೋಷಗಳನ್ನುಪತ್ತೆ ಹಚ್ಚಿ ಹೊಸ ಅಪ್‌ಡೇಟ್‌ಗಳಲ್ಲಿ ಅದನ್ನು ನಿವಾರಿಸಿರುತ್ತವೆ.
ನಿಮ್ಮ ಮೊಬೈಲ್‌ನಲ್ಲಿ ಸೆಟಿಂಗ್ಸ್ ಗೆ ಹೋಗಿ, ಎಬೌಟ್ ಫೋನ್ ಒತ್ತಿ, ಅದರಲ್ಲಿ ಸಿಸ್ಟಂ ಅಪ್ ಡೇಟ್ಸ್ ಅಂತಿರುತ್ತದೆ. ಅದನ್ನು ಒತ್ತಿ, ಚೆಕಿಂಗ್ ಫಾರ್ ಅಪ್‌ಡೇಟ್ಸ್ ಎಂದು ರನ್ ಆಗಿ ಹೊಸ ಅಪ್‌ಡೇಟ್‌ಇದೆ ಎಂದು ತೋರಿಸುತ್ತದೆ. ಅದು ಇಷ್ಟು ಜಿಬಿಅಥವಾ ಎಂಬಿ ಇದೆ. ಇದರಲ್ಲಿ ಇಂತಿಂಥದೋಷಗಳನ್ನು ಸರಿಪಡಿಸಲಾಗಿದೆ ಎಂಬ ಅಪ್‌ಡೇಟ್ ಲಾಗ್ ಇರುತ್ತದೆ. ಅದನ್ನು ನೋಡಿ ಅಪ್‌ಡೇಟ್ ಎಂಬುದರ ಮೇಲೆ ಒತ್ತಿದರೆ ಹೊಸ ಅಪ್‌ಡೇಟ್ ಡೌನ್‌ಲೋಡ್ ಆಗುತ್ತದೆ. ಡೌನ್‌ಲೋಡ್‌ಆದ ಬಳಿಕ ಇನ್‌ಸ್ಟಾಲ್ ಕೇಳುತ್ತದೆ. ಅದಕ್ಕೆ ಓಕೆಕೊಡಿ. ಮತ್ತೆ ಫೋನನ್ನು ರೀಸ್ಟಾರ್ಟ್ ಮಾಡಲುಕೇಳುತ್ತದೆ. ಓಕೆ ಕೊಟ್ಟ ನಂತರ ಫೋನ್ ರೀಸ್ಟಾರ್ಟ್‌ಆಗುತ್ತದೆ. ಈ ಎಲ್ಲ ಪ್ರಕ್ರಿಯೆಗೆ ಅರ್ಧ ಗಂಟೆಗೂಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ಒಮ್ಮೊಮ್ಮೆ ಹೊಸ ಅಪ್‌ಡೇಟ್ 1 ಜಿಬಿಯಿಂದ 2 ಜಿಬಿ ಸಹಇರುತ್ತದೆ. ಅದು ಡೌನ್‌ಲೋಡ್ ಆಗಲು ಒಂದು ಗಂಟೆಯೂ ಆಗಬಹುದು. ಈ ಅಪ್‌ಡೇಟ್‌ಗಳನ್ನಮಾಡಿಕೊಂಡಾಗ ನಿಮ್ಮ ಮೊಬೈಲ್ ಇಂಟರ್‌ಫೇಸ್‌ನ ವಿನ್ಯಾಸವೂ ಬದಲಾಗುತ್ತದೆ. ಮೊಬೈಲ್ ಸಾಫ್ಟ್ ವೇರ್‌ನಲ್ಲಿರುವ ಸಣ್ಣಪುಟ್ಟ ತೊಂದರೆಗಳೂ ನಿವಾರಣೆಯಾಗುತ್ತವೆ.
ಕನಿಷ್ಠ 2 ಜಿಬಿ ಬೇಕಾಗುತ್ತೆ! : ಸಣ್ಣ ಅಪ್‌ಡೇಟ್‌ಗಳಲ್ಲದೇ, ಆಂಡ್ರಾಯ್ಡ್ ಆವೃತ್ತಿಗಳೂ ಸಹ ಅಪ್‌ಡೇಟ್‌ನಲ್ಲಿ ಬರುತ್ತವೆ. ಈಗ ಆಂಡ್ರಾಯ್ಡ್ 10 ಬಹುತೇಕರಲ್ಲಿ ಇದೆ. ನೀವು ಮೊಬೈಲ್ ಕೊಂಡು ಐದಾರು ತಿಂಗಳಾಗಿದ್ದರೆ, ಎರಡು ಮೂರು ತಿಂಗಳಲ್ಲಿ ನಿಮ್ಮ ಮೊಬೈಲ್ ಗೆ ಆಂಡ್ರಾಯ್ಡ್ 11 ಅಪ್‌ಡೇಟ್ ಬರಲೂಬಹುದು. ಈ ಅಪ್‌ಡೇಟ್‌ಗಳಿಗೆ ಕನಿಷ್ಠ 2 ಜಿಬಿ ಡಾಟಾ ಬೇಕಾಗುತ್ತದೆ.
– ಕೆ.ಎಸ್. ಬನಶಂಕರ ಆರಾಧ್ಯ