Advertisement

ಕಾರು ಪಿಕಪ್‌ ಕಡಿಮೆ ಇದೆಯೇ? ಪರಿಹಾರವೇನು?

12:45 AM Aug 09, 2019 | mahesh |

ಕೆಲ ದಿನಗಳಿಂದ ಕಾರು ಎಂದಿನಂತೆ ಪಿಕಪ್‌ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಪಿಕಪ್‌ ಕಡಿಮೆಯಾಗಲು ಕಾರಣಗಳು ಹಲವು. ಅವುಗಳ ಬಗ್ಗೆ ಕೂಡಲೇ ಗಮನಹರಿಸಿ ಸಮಸ್ಯೆ ಪರಿಹರಿಸಿಕೊಳ್ಳದಿದ್ದರೆ, ಎಂಜಿನ್‌ ಕಾರ್ಯಕ್ಷಮತೆ ಮೇಲೆ ಅದು ಪರಿಣಾಮ ಬೀರುತ್ತದೆ.

Advertisement

ಫ‌್ಯುಯೆಲ್ ಫಿಲ್ಟರ್‌
ಫ‌್ಯುಯೆಲ್ ಫಿಲ್ಟರ್‌ ಎನ್ನುವುದು ಕಾರಿಗೆ ಶುದ್ಧ ಇಂಧನ ಹೋಗಲು ನೆರವು ನೀಡುತ್ತದೆ. ಇದು ಫ‌್ಯುಯೆಲ್ ಪಂಪ್‌ ಮತ್ತು ಫ‌್ಯುಯೆಲ್ ಇಂಜೆಕ್ಟರ್‌ ಮಧ್ಯೆ ಇರುತ್ತದೆ. ಕೆಲವು ಕಾರುಗಳಲ್ಲಿ ತಳ ಭಾಗದಲ್ಲಿ, ಕೆಲವು ಕಾರುಗಳಲ್ಲಿ ಕಾರಿನ ಬಾನೆಟ್ ಒಳಗಡೆಯೂ ಇರುತ್ತವೆ. ಇದು ಸುಸ್ಥಿತಿಯಲ್ಲಿರಬೇಕಾದ್ದು ಅಗತ್ಯ. 20-30 ಸಾವಿರ ಕಿ.ಮೀ.ಗೆ ಒಂದು ಬಾರಿ ಇದನ್ನು ಬದಲಾಯಿ ಸುವುದಿದೆ. ಅಥವಾ ಕ್ಲೀನ್‌ ಮಾಡಿ ಹಾಕಬೇಕು. ಇದರಲ್ಲಿ ಕಸ ನಿಂತು ಕೊಂಡರೆ, ಎಂಜಿನ್‌ ಪಿಕಪ್‌ ಸಮಸ್ಯೆಯಾಗುತ್ತದೆ. ಹೆಚ್ಚಾಗಿ ಇದರಲ್ಲಿ ಸಮಸ್ಯೆಯಿದ್ದರೆ ಜೆರ್ಕಿಂಗ್‌ ಕಾಣಿಸಿಕೊಳ್ಳಬಹುದು.

ಎಲೆಕ್ಟ್ರಾನಿಕ್‌ ಸಮಸ್ಯೆ
ಕಾರಿನ ದಹನ ವ್ಯವಸ್ಥೆಯನ್ನು ನಿಯಂತ್ರಿಸುವ ಒಂದು ಎಲೆಕ್ಟ್ರಾನಿಕ್‌ ಉಪಕರಣವಿದೆ. ಇದಕ್ಕೆ ಎಂಜಿನ್‌ ಕಂಟ್ರೋಲ್ ಯುನಿಟ್ (ಇಸಿಯು) ಎಂದು ಹೆಸರು. ಇದು ಎಂಜಿನ್‌ ಗರಿಷ್ಠ ಸಾಮರ್ಥ್ಯವನ್ನು ಒದಗಿಸುವಂತೆ ಪ್ರಯತ್ನಿಸುತ್ತದೆ. ಇದು ಹಾಳಾದರೆ ಪಿಕಪ್‌ ಕಡಿಮೆಯಾಗಬಹುದು. ಇಂಧನ ಹರಿವು, ದಹನ ಇತ್ಯಾದಿಗಳನ್ನು ಇದು ನಿಯಂತ್ರಿಸುತ್ತಿದ್ದು, ಸರಿಯಾದ ಪ್ರಮಾಣದಲ್ಲಿರಬೇಕಾಗುತ್ತದೆ. ಇತರ ಸಮಸ್ಯೆಗಳಿದ್ದರೂ ಅದನ್ನು ಪರಿಣತರೇ ಪರಿಶೀಲನೆ ಮಾಡಬೇಕಾಗುತ್ತದೆ.

ಸ್ಪಾರ್ಕ್‌ ಪ್ಲಗ್‌
ಇಂಧನ ದಹನಕ್ಕೆ ಬೇಕಾದ ಕಿಡಿಯನ್ನು ಎಂಜಿನ್‌ ಒಳಗೆ ಹೊತ್ತಿಸಿಕೊಡುವುದು ಸ್ಪಾರ್ಕ್‌ ಪ್ಲಗ್‌ನ ಕೆಲಸ. ಇದರ ತುದಿಯಲ್ಲಿ ಕಾರ್ಬನ್‌ ತುಂಬಿದ್ದರೆ ಸ್ಪಾರ್ಕ್‌ ಆಗುವ ಪ್ರಮಾಣ ಕಡಿಮೆಯಿರುತ್ತದೆ. ಪ್ರತಿ ಬಾರಿ ಇದನ್ನು ತೆಗೆದು ಕ್ಲೀನ್‌ ಮಾಡುತ್ತಿರಬೇಕು. ಸುಮಾರು 35 ಸಾವಿರ ಕಿ.ಮೀ.ಗೊಮ್ಮೆ ಬದಲಾಯಿಸಬೇಕು. ಸ್ಪಾರ್ಕ್‌ ಪ್ಲಗ್‌ನ ಲೆಡ್‌ನ‌ ಅಂತರ ಕಡಿಮೆಯಿರುವುದು, ಕಾರ್ಬನ್‌ ನಿಂತಿರುವುದರಿಂದಲೂ ಪಿಕಪ್‌ ಕಡಿಮೆಯಾಗುತ್ತದೆ. ಜತೆಗೆ ಜರ್ಕಿಂಗ್‌ ಕೂಡ ಬರಬಹುದು.

ಏರ್‌ಫಿಲ್ಟರ್‌
ಶುದ್ಧಗಾಳಿಗೆ ನೆರವು ನೀಡುವುದು ಏರ್‌ಫಿಲ್ಟರ್‌. ಇದು ಹೊರಗಿನ ಧೂಳನ್ನು ತಡೆಯುತ್ತದೆ. ಒಂದು ವೇಳೆ ಧೂಳು ವಿಪರೀತವಿದ್ದು, ಬ್ಲಾಕ್‌ ಆಗಿದ್ದರೆ, ಗಾಳಿ ಚಲನೆಗೆ ತೊಂದರೆಯಾಗುತ್ತದೆ. ಕಾರಿನ ಇದರಿಂದ ಇಂಧನ ದಹನ ವ್ಯವಸ್ಥೆ ಯಲ್ಲಿ ಏರುಪೇರಾಗಿ ಪಿಕಪ್‌ಗೆ ಸಮಸ್ಯೆಯಾಗುತ್ತದೆ. ಪ್ರತಿ 6 ತಿಂಗಳಿಗೊಮ್ಮೆ ಏರ್‌ಫಿಲ್ಟರ್‌ ಕ್ಲೀನ್‌ ಮಾಡುತ್ತಿರಬೇಕು. 35 ಸಾವಿರ ಕಿ.ಮೀ.ಗೊಮ್ಮೆ ಬದಲಾವಣೆ ಮಾಡಬೇಕು.

Advertisement

ಈಶ

Advertisement

Udayavani is now on Telegram. Click here to join our channel and stay updated with the latest news.

Next