Advertisement

IPL Playoff ಪಂದ್ಯಗಳಿಗೆ ಮೀಸಲು ದಿನವಿದೆಯೇ? ಮಳೆ ನಿಯಮ ಏನು ಹೇಳುತ್ತದೆ?

11:40 AM May 20, 2024 | Team Udayavani |

ಬೆಂಗಳೂರು: 17ನೇ ಸೀಸನ್ ನ ಇಂಡಿಯನ್ ಪ್ರೀಮಿಯರ್ ಲೀಗ್ ನ ಲೀಗ್ ಹಂತದ ಪಂದ್ಯಗಳು ಮುಗಿದು ಇದೀಗ ಪ್ಲೇ ಆಫ್ ಹಂತಕ್ಕೆ ಕಾಲಿಟ್ಟಿದೆ. ಇದೀಗ ಕೂಟದಲ್ಲಿ ಕೇವಲ ನಾಲ್ಕು ತಂಡಗಳು ಉಳಿದಿದ್ದು, ನಾಲ್ಕು ಪಂದ್ಯಗಳು ಬಾಕಿ ಉಳಿದಿದೆ.

Advertisement

ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ಲೇ ಆಫ್ ಪ್ರವೇಶಿಸಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲೆರಡು ಸ್ಥಾನದಲ್ಲಿರುವ ಕೆಕೆಆರ್ ಮತ್ತು ಹೈದರಾಬಾದ್ ತಂಡಗಳು ಮುಖಾಮುಖಿಯಾದರೆ, ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ಮತ್ತು ಆರ್ ಸಿಬಿ ಆಡಲಿದೆ.

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್ ಪ್ರವೇಸಲಿದೆ. ಇಲ್ಲಿ ಸೋತ ತಂಡವು ಎಲಿಮಿನೇಟರ್ ಪಂದ್ಯ ಗೆದ್ದ ತಂಡದ ಜೊತೆಗೆ ಎರಡನೇ ಕ್ವಾಲಿಫೈಯರ್ ಪಂದ್ಯ ಆಡಲಿದೆ. ಇಲ್ಲಿ ಗೆದ್ದ ತಂಡ ಫೈನಲ್ ಗೆ ಅರ್ಹತೆ ಪಡೆಯಲಿದೆ.

ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದರೆ, ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ.

ಮಳೆ ಬಂದರೆ?

Advertisement

ಹಲವು ಲೀಗ್ ಹಂತದ ಪಂದ್ಯಗಳು ಮಳೆಯ ಕಾರಣದಿಂದ ವಾಶೌಟಾಗಿದೆ. ಅಲ್ಲದೆ ಇನ್ನೂ ದೇಶದ ಹಲವೆಡೆ ಮಳೆ ಬರುವ ಸಾಧ್ಯತೆ ಇರುವ ಕಾರಣ, ಪ್ಲೇ ಆಫ್ ಪಂದ್ಯಗಳಿಗೂ ಮಳೆ ಭೀತಿ ಎದುರಾಗಿದೆ. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2024 ರ ನಾಕೌಟ್ ಹಂತಕ್ಕೆ ಮೀಸಲು ದಿನವನ್ನು (Reserve day) ಇರಿಸಿದೆ.

ಪ್ಲೇಆಫ್‌ ಗಳ ಸಂದರ್ಭದಲ್ಲಿ, ಎರಡೂ ತಂಡಗಳಿಗೆ ಪೂರ್ಣ ಪಂದ್ಯ ನಡೆಸಲು ಹೆಚ್ಚುವರಿ 120 ನಿಮಿಷಗಳನ್ನು ನೀಡಲಾಗುತ್ತದೆ. ಮಳೆ ಕಾಟ ಮತ್ತೂ ಹೆಚ್ಚಿದರೆ ಕಡಿಮೆ ಓವರ್‌ ಗಳಲ್ಲಿ ಪಂದ್ಯ ನಡೆಸಲಾಗುತ್ತದೆ. ಡಿಎಲ್ ಎಸ್ ವಿಧಾನವನ್ನು ಬಳಸಲಾಗುತ್ತದೆ.

ಆದರೂ ನಿಗದಿ ಮಾಡಿದ ದಿನದಂದು ಪಂದ್ಯ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಮರು ದಿನ ಪಂದ್ಯ ನಡೆಸಲಾಗುತ್ತದೆ. ಮೊದಲ ದಿನ ಯಾವ ಹಂತದಲ್ಲಿ ಪಂದ್ಯ ನಿಂತಿದೆಯೋ ಅಲ್ಲಿಂದಲೇ ಮರು ಆರಂಭಿಸಲಾಗುತ್ತದೆ.

ರಿಸರ್ವ್ ದಿನದಂದೂ ಮಳೆ ಬಂದರೆ?

ಈ ಪ್ರಶ್ನೆಯೂ ಕಾಡುತ್ತದೆ. ಒಂದು ವೇಳೆ ಮೀಸಲು ದಿನದಂದೂ ಮಳೆ ಅಡ್ಡಿಸಿದರೆ ಸ್ಪರ್ಧೆಯ ವಿಜೇತರನ್ನು ನಿರ್ಧರಿಸಲು ಸೂಪರ್ ಓವರ್‌ ಗೆ ಅವಕಾಶವಿದೆ. ಆದರೆ ಸೂಪರ್ ಓವರ್ ಗೂ ಸಮಯ ಸಿಗದೆ ಇದ್ದಲ್ಲಿ ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಯಾರು ಉತ್ತಮ ಸ್ಥಾನ ಹೊಂದಿರುತ್ತಾರೆ ಅವರು ಮುಂದಿನ ಹಂತಕ್ಕೆ ತೇರ್ಗಡೆಯಾಗುತ್ತಾರೆ. ಇದು ಫೈನಲ್ ಗೂ ಅನ್ವಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next