Advertisement

‘ಟೀಚರ್‌’ಅಧ್ಯಾಯ ಇನ್ನೊಂದಿದೆಯೇ?

04:07 PM Mar 29, 2018 | |

ಸ್ವಯಂ ಪ್ರಭಾ ಎಂಟರ್‌ಟೈನ್‌ಮೆಂಟ್‌ ಹಾಗೂ ಪ್ರೊಡಕ್ಷನ್‌ ಅರ್ಪಿಸಿದ ಕೆ. ರತ್ನಾಕರ್‌ ಕಾಮತ್‌ ನಿರ್ಮಾಣದ, ಕಿಶೋರ್‌ ಮೂಡಬಿದಿರೆ ಕಥೆ- ಚಿತ್ರಕಥೆ, ನಿರ್ದೇಶನದ ‘ಅಪ್ಪೆ ಟೀಚರ್‌’ ಸಿನೆಮಾ ಕರಾವಳಿಯಾದ್ಯಂತ ಸಾಕಷ್ಟು ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೂರೇ ದಿನದಲ್ಲಿ ಲಕ್ಷಗಟ್ಟಲೆ ಬಾಕ್ಸ್‌ ಆಫೀಸ್‌ನಲ್ಲಿ ಬಾಚಿಕೊಂಡಿದೆ. ತಾಯಿಯ ಕಥೆಯನ್ನು ಮುಖ್ಯ ನೆಲೆಯಲ್ಲಿರಿಸಿ ಕಥೆಯನ್ನು ಹೆಣೆಯಲಾಗಿದೆ. ಅದಕ್ಕೆ ಸೆಟ್‌ ಆಗುವ ರೀತಿಯಲ್ಲಿ ಕಾಮಿಡಿಯನ್ನು ಹದವಾಗಿ ಮಿಕ್ಸ್‌ ಮಾಡಲಾಗಿದೆ. ಸಿನೆಮಾ ಡ್ಯುರೇಶನ್‌ ಸ್ವಲ್ಪ ಉದ್ದ ಆಯಿತು ಎಂದೆನಿಸಿದರೂ, ಸಿನೆಮಾ ಮಗ್ಗುಲು ಬದಲಾಯಿಸುವ ರೀತಿ ಖುಷಿ ನೀಡುತ್ತದೆ.

Advertisement

ಸಸ್ಪೆನ್ಸ್‌ ಕಥೆಯನ್ನು ಕಾಮಿಡಿ ಗೆಟಪ್‌ನಲ್ಲಿಯೇ ಜೋಡಿಸಿರುವ ಕಾರಣದಿಂದ ಸಿನೆಮಾ ಸಾಕಷ್ಟು ಆಸಕ್ತಿ ಮೂಡಿಸಿದೆ. ವಿಶೇಷ ಅಂದರೆ, ಸಿನೆಮಾದ ಕೊನೆಗೆ ‘ಸಶೇಷ’ ಎಂದು ಮೂಡಿಬರುವ ಕಾರಣದಿಂದ ಈ ಚಿತ್ರ ಎರಡನೇ ಭಾಗದಲ್ಲಿ ಮೂಡಿಬರಲಿದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಮಂಗಳೂರಿನ ಸಿನೆಪೊಲಿಸ್‌, ಬಿಗ್‌ ಸಿನೆಮಾಸ್‌, ಪಿವಿಆರ್‌, ಮಣಿಪಾಲದ ಭಾರತ್‌ ಸಿನೆಮಾಸ್‌, ಉಡುಪಿಯ ಕಲ್ಪನಾ, ಕಾರ್ಕಳದ ರಾಧಿಕಾ, ಮೂಡಬಿದಿರೆಯ ಅಮರಶ್ರೀ, ಸುರತ್ಕಲ್‌ನ ನಟರಾಜ್‌, ಬೆಳ್ತಂಗಡಿಯ ಭಾರತ್‌, ಸುಳ್ಯದ ಸಂತೋಷ್‌ನಲ್ಲಿ ‘ಅಪ್ಪೆ ಟೀಚರ್‌’ ಸಕ್ಸಸ್‌ ಬರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next