ಪತಿ ನೀಡುವ ತ್ರಿವಳಿ ತಲಾಖ್‌ಗೆ “ಬೇಡ’ ಎನ್ನುವ ಅಧಿಕಾರ ಮಹಿಳೆಗಿದೆಯೇ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯನ್ನು ಸುಪ್ರೀಂ ಪ್ರಶ್ನಿಸಿದೆ. ಜತೆಗೆ, ಒಂದೇ ಬಾರಿಗೆ ವಿಚ್ಛೇದನ ನೀಡುವ ವಿಚಾರ ಕುರಾನ್‌ನಲ್ಲಿ ಎಲ್ಲಾದರೂ ಉಲ್ಲೇಖವಾಗಿದೆಯೇ ಎಂದೂ ಸಿಜೆಐ ಜೆ.ಎಸ್.ಖೆಹರ್ ನೇತೃತ್ವದ ನ್ಯಾಯಪೀಠ ಕೇಳಿದೆ.
Advertisement
ಬುಧವಾರ ತ್ರಿವಳಿ ತಲಾಖ್ ವಿರುದ್ಧ ವಾದ ಮಂಡಿ ಸಿದ ಕೇಂದ್ರ ಸರಕಾರ ಮುಸ್ಲಿಂ ಕಾನೂನು ಮಂಡಳಿ ಪರ ನ್ಯಾಯವಾದಿ ಕಪಿಲ್ ಸಿಬಲ್ ಎತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸುವ ರೀತಿಯಲ್ಲೇ ಪ್ರತಿಕ್ರಿಯಿಸಿತು. “ಇದನ್ನು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವಿನ ತಾರತಮ್ಯ ಎಂದು ನೋಡಬೇಡಿ. ಇದು ಉಳ್ಳವರು (ಪುರುಷರು) ಮತ್ತು ಇಲ್ಲದವರು (ಮಹಿಳೆಯರ) ನಡುವಿನ ಹೋರಾಟ. 25 ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಈ ಪದ್ಧತಿ ಇಲ್ಲ ಎಂದಾದ ಮೇಲೆ ಅದು ಇಸ್ಲಾಂನಲ್ಲಿ ಕಡ್ಡಾಯ ಎಂದು ಹೇಳಲಾಗದು’ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ವಾದಿಸಿದರು.
ತ್ರಿವಳಿ ತಲಾಖ್ 1400 ವರ್ಷಗಳಿಂದಲೂ ಆಚರಿಸಿ ಕೊಂಡು ಬರಲಾಗುತ್ತಿದೆ ಎಂಬ ವಾದ ಸರಿಯಲ್ಲ. ಹಾಗಾದರೆ, ನರಬಲಿಯನ್ನು ಕೂಡ ಸಮರ್ಥಿಸಿಧಿಕೊಂಡಂತಾಗುತ್ತದೆ. ಹಿಂದೂಗಳು ಆಚರಿಸುತ್ತಿದ್ದ ಸತಿ ಪದ್ಧತಿ, ದೇವದಾಸಿ ಪದ್ಧತಿಯನ್ನು ಈಗ ನಿಷೇಧಿಸಿಲ್ಲವೇ ಎಂದೂ ರೋಹಟಗಿ ಪ್ರಶ್ನಿಸಿದ್ದಾರೆ. ಮಂಗಳವಾರವಷ್ಟೇ ವಾದಿಸಿದ್ದ ಸಿಬಲ್, “ಹಿಂದೂ ಧಿಗಳು ಅಯೋಧ್ಯೆ ಹೇಗೆ ರಾಮಜನ್ಮಭೂಮಿ ಎಂದು ನಂಬಿದ್ದಾರೋ, ತ್ರಿವಳಿ ತಲಾಖ್ ಕೂಡ ಮುಸ್ಲಿಧಿಮರ ನಂಬಿಕೆಯ ಪ್ರಶ್ನೆ. ಅದನ್ನು 1400 ವರ್ಷಧಿಗಳಿಂದಲೂ ಆಚರಿಸಲಾಗುತ್ತಿದೆ,’ ಎಂದಿದ್ದರು. ಸಿಬಲ್ ವಾದದಿಂದ ಕಾಂಗ್ರೆಸ್‌ಗೆ ಮುಜುಗರ
ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪರ ವಾದಿಸುವ ಮೂಲಕ ತ್ರಿವಳಿ ತಲಾಖ್ ಅನ್ನು ಸಮರ್ಥಿಸಿಕೊಳ್ಳುತ್ತಿರುವ ಕಪಿಲ್ ಸಿಬಲ್ ನಡೆಯಿಂದ ಕಾಂಗ್ರೆಸ್ ನಾಯಕತ್ವ ತೀವ್ರ ಮುಜುಗರಕ್ಕೀಡಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಹಿರಿಯ ಕಾಂಗ್ರೆಸ್ ನಾಯಕರೂ, ರಾಜ್ಯಸಭಾ ಸದಸ್ಯರೂ ಆಗಿರುವ ಸಿಬಲ್ ಸುಪ್ರೀಂನಲ್ಲಿ ತ್ರಿವಳಿ ತಲಾಖ್ ಪರ ವಾದಿಸುತ್ತಿರುವುದಕ್ಕೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಅಲ್ಲದೆ, ಸಿಬಲ್ ವಾದವು ತ್ರಿವಳಿ ತಲಾಖ್ ಕುರಿತು ಪಕ್ಷದ ನಿಲುವಿಗೆ ವಿರುದ್ಧವಾಗಿದ್ದು, ಅದು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿದೆ ಎನ್ನುವುದು ಕಾಂಗ್ರೆಸ್ ನಾಯಕರ ಭೀತಿಗೆ ಕಾರಣ ಎನ್ನಲಾಗಿದೆ. ತ್ರಿವಳಿ ತಲಾಖ್ ಮಹಿಳೆಯರ ಹಕ್ಕುಗಳ ಉಲ್ಲಂಘನೆ ಎನ್ನುವ ಮೂಲಕ ಕಾಂಗ್ರೆಸ್ ಓಲೈಕೆ ರಾಜಕಾರಣದಿಂದ ಹೊರಬಂದು, ಪ್ರಗತಿಪರ ಧೋರಣೆ ತಾಳಲು ಯತ್ನಿಸುತ್ತಿರುವಾಗಲೇ ಈ ಬೆಳವಣಿಗೆ ನಡೆದಿರುವುದು ಇರುಸುಮುರುಸಿಗೆ ಕಾರಣವಾಗಿದೆ.